ಪುತ್ತೂರು: ಪತಿಯ ಉತ್ತರ ಕ್ರಿಯೆಯಂದೇ ಪತ್ನಿ ಆತ್ಮಹತ್ಯೆ
Update: 2022-08-20 14:46 IST
ಪುತ್ತೂರು: ಪತಿಯ ಉತ್ತರ ಕ್ರಿಯೆಯ ದಿನದಂದೇ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಕೊಂದಲ್ಕಾನ ಎಂಬಲ್ಲಿ ನಡೆದಿದೆ.
ಕೊಂದಲ್ಕಾನ ನಿವಾಸಿ ದಿ.ಕೃಷ್ಣ ನಾಯ್ಕ ಎಂಬವರ ಪತ್ನಿ ವಸಂತಿ(42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದು ಬಂದಿದೆ.
ಕೃಷ್ಣ ನಾಯ್ಕ ಅವರು ಕೆಲ ದಿನಗಳ ಹಿಂದೆ ನಿಧನರಾಗಿದ್ದರು. ಅವರ ಉತ್ತರ ಕ್ರಿಯೆ ಇಂದು ಉಪ್ಪಿನಂಗಡಿಯಲ್ಲಿ ನಡೆಯಲಿತ್ತು. ಇದೇ ಸಂದರ್ಭದಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ತುಮಕೂರು | ವಿದೇಶದಿಂದ ವಾಪಸ್ಸಾಗಲು ನಿರಾಕರಿಸಿದ ಪತ್ನಿ: ಮೂವರು ಮಕ್ಕಳಿಗೆ ವಿಷವುಣಿಸಿ ವ್ಯಕ್ತಿ ಆತ್ಮಹತ್ಯೆ