×
Ad

ಆ.23: ವೋಟರ್ ಐಡಿ-ಆಧಾರ್ ಲಿಂಗ್ ಶಿಬಿರ

Update: 2022-08-20 17:50 IST

ಮಂಗಳೂರು : ವಿಧಾನ ಪರಿಷತ್ ಮಾಜಿ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿ ಸೋಜರ ನೇತೃತ್ವದಲ್ಲಿ ಆ.23ರಂದು ಬೆಳಗ್ಗೆ ೧೦:೩೦ರಿಂದ ಸಂಜೆ ೪ರವರೆಗೆ ಮಂಗಳೂರು ಸ್ಟೋರ್ಸ್‌  ಸಭಾಭವನದಲ್ಲಿ ಅತ್ತಾವರ, ಫಳ್ನೀರ್, ಜಪ್ಪು, ಮಂಗಳಾದೇವಿ, ಬೋಳಾರ ವಾರ್ಡ್ ವ್ಯಾಪ್ತಿಯ ಮತದಾರರ ಸೇರ್ಪಡೆ, ಮತದಾರರ ಗುರುತು ಚೀಟಿಗೆ ಆಧಾರ್ ಲಿಂಕ್ ಮಾಡುವ ಶಿಬಿರ ಆಯೋಜಿಸಲಾಗಿದೆ.

ಹೊಸ ಮತದಾರರ ಸೇರ್ಪಡೆ ಮತ್ತು ಆಧಾರ್ ಅಥವಾ ಇನ್ನಿತರ ೧೧ ದಾಖಲೆಗಳಿಗೆ ಲಿಂಕ್ ಮಾಡುವ ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲೀಂ ಶಿಬಿರ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News