×
Ad

ಮಣಿಪಾಲ ಗಾಂಧಿಯನ್ ಸೆಂಟರ್‌ನಲ್ಲಿ ಆ.22ಕ್ಕೆ ಓರಿಯಂಟೇಷನ್ ಕಾರ್ಯಕ್ರಮ

Update: 2022-08-20 19:41 IST

ಉಡುಪಿ, ಆ.20: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಹೊಸ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ ಆ.22ರ ಸೋಮವಾರ ಬೆಳಗ್ಗೆ 10.30ಕ್ಕೆ ಹಳೆ ಟ್ಯಾಪ್ಮಿ ಕಟ್ಟಡ ದಲ್ಲಿರುವ ಜಿಸಿಪಿಎಎಸ್‌ನ ಸರ್ವೋದಯ ಹಾಲ್‌ನಲ್ಲಿ ನಡೆಯಲಿದೆ.

ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಜನರಲ್ ಸರ್ವಿಸಸ್‌ನ ನಿರ್ದೇಶಕ ಕರ್ನಲ್ ಪ್ರಕಾಶ್‌ ಚಂದ್ರ, ಮಣಿಪಾಲ ಎಂಕೊಡ್ಸ್‌ನ ಪ್ರಾಧ್ಯಾಪಕ ಡಾ.ಶಶಿರಶ್ಮಿ ಆಚಾರ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 

ದೇಶ, ವಿದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಈ ಬಾರಿಯ ಎಂಎ-ಇಕೊಸೊಫಿಕಲ್ ಎಸ್ಥೆಟಿಕ್ಸ್, ಎಂಎ-ಆರ್ಟ್ ಅಂಡ್ ಪೀಸ್ ಸ್ಟಡೀಸ್ ಮತ್ತು ಬಿಎ-ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್ ಅಧ್ಯಯನದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News