ಸೊಮಾಲಿಯಾ: ಹೋಟೆಲ್ ನಲ್ಲಿ ಉಗ್ರರ ಗುಂಡಿನ ದಾಳಿ; 8 ಮಂದಿ ಮೃತ್ಯು

Update: 2022-08-20 16:51 GMT

ಮೊಗದಿಶು, ಆ.20: ಸೊಮಾಲಿಯಾದ ರಾಜಧಾನಿ ಮೊಗದಿಶುವಿನ ಪ್ರಸಿದ್ಧ ಹೋಟೆಲ್ ಮೇಲೆ ಶುಕ್ರವಾರ ರಾತ್ರಿ ಅಲ್-ಶಬಾಬ್ ಸಂಘಟನೆಯ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಟ 8 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 

ಶನಿವಾರ ಬೆಳಗ್ಗೆಯೂ ಹೋಟೆಲ್ನಲ್ಲಿ ಗುಂಡಿನ ದಾಳಿ ಮುಂದುವರಿದಿದೆ. ಉಗ್ರರು ಈಗಲೂ ಹೋಟೆಲ್ನಲ್ಲಿ ಅಡಗಿಕೊಂಡು ಗುಂಡು ಹಾರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಖೈದಾ ಜತೆ ನೇರ ಸಂಪರ್ಕ ಇರುವ ಅಲ್-ಶಬಾಬ್ ಸಂಘಟನೆಯ ಉಗ್ರರು ಶುಕ್ರವಾರ ಸಂಜೆ ಹಯಾತ್ ಹೋಟೆಲ್ನ ಪ್ರವೇಶದ್ವಾರದ ಬಳಿ ಬಾಂಬ್ ಸ್ಫೋಟಿಸಿ ಬಳಿಕ ಗುಂಡಿನ ದಾಳಿ ನಡೆಸುತ್ತಾ ಹೋಟೆಲ್ನ ಒಳಗೆ ನುಗ್ಗಿದರು.

ಹೋಟೆಲ್ನಲ್ಲಿದ್ದ ಬಹುತೇಕ ಜನರನ್ನು ರಕ್ಷಿಸಲಾಗಿದೆ, ಆದರೆ ಇದುವರೆಗೆ 8 ನಾಗರಿಕರು ಮೃತಪಟ್ಟಿರುವ ಮಾಹಿತಿಯಿದೆ. ಉಗ್ರರು ಈಗಲೂ ಹೋಟೆಲ್ನ ಕೋಣೆಯಲ್ಲಿ ಅಡಗಿದ್ದು ಅವರನ್ನು ತಟಸ್ಥಗೊಳಿಸಲು ಭದ್ರತಾ ಪಡೆ ಕಾರ್ಯಾಚರಣೆ ನಡೆಸುತ್ತಿದೆ. ಹೋಟೆಲ್ನಲ್ಲಿ ಈಗಲೂ ಹಲವು ನಾಗರಿಕರು ಸಿಕ್ಕಿಹಾಕಿಕೊಂಡಿದ್ದು ಅವರನ್ನು ಸುರಕ್ಷಿತವಾಗಿ ತೆರವುಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಭದ್ರತಾ ಪಡೆಯ ಕಮಾಂಡರ್ ಮುಹಮ್ಮದ್ ಅಬ್ದಿಕಾದಿರ್ ಅನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಸೊಮಾಲಿಯಾದಲ್ಲಿ ಹಲವು ತಿಂಗಳ ರಾಜಕೀಯ ಅನಿಶ್ಚಿತತೆಯ ಬಳಿಕ ಕಳೆದ ಮೇ ತಿಂಗಳಿನಲ್ಲಿ ಹಸನ್ ಶೇಖ್ ಮೊಹಮ್ಮದ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ನಡೆದಿರುವ ಉಗ್ರರ ಬೃಹತ್ ದಾಳಿ ಇದಾಗಿದೆ. ಸುಮಾರು 15 ವರ್ಷದಿಂದ ಸೊಮಾಲಿಯಾದ ಸರಕಾರದ ವಿರುದ್ಧ ಸಂಷರ್ಘದಲ್ಲಿ ನಿರತರಾಗಿರುವ ಅಲ್ಶಬಾಬ್ ಸಂಘಟನೆ ಈ ದಾಳಿಯ ಹೊಣೆ ವಹಿಸಿಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News