ಚೀನಾದಿಂದ ಅಸಾಂಪ್ರದಾಯಿಕ ರೂಪದ ಯುದ್ಧ: ತೈವಾನ್

Update: 2022-08-20 17:04 GMT

ತೈಪೆ, ಆ.20: ಚೀನಾವು ತೈವಾನ್ ವಿರುದ್ಧ ಅಸಾಂಪ್ರದಾಯಿಕ ರೂಪದ ಯುದ್ಧದ ವ್ಯೆಹ ಹೆಣೆದಿದೆ ಎಂದು ತೈವಾನ್ ಹೇಳಿದೆ. ತೈವಾನ್ಗೆ ಆತಂಕ ಒಡ್ಡುವ ರೀತಿಯ ಹೇಳಿಕೆಗಳನ್ನು ಚೀನಾದ ಸೇನೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿದೆ. ಮಾನಸಿಕ ಒತ್ತಡ ಹೇರುವ ವಿಧಾನ ಇದಾಗಿದೆ ಎಂದು ತೈವಾನ್ ವಾಯುಪಡೆಯ ಕಾರ್ಯಾಚರಣೆ ವಿಭಾಗದ ಅಧಿಕಾರಿ ತುಂಗ್ ಪೆಯ್ಲಿನ್ ಪ್ರತಿಪಾದಿಸಿದ್ದಾರೆ. 

ತೈವಾನ್ ಬಳಿಯ ಪೆಂಘು ದ್ವೀಪದ ಆಗಸದಲ್ಲಿ ತನ್ನ ಜೆಟ್ ವಿಮಾನಗಳು ಹಾರಾಟ ನಡೆಸುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಚೀನಾದ ಸೇನೆ ಪೋಸ್ಟ್ ಮಾಡಿದ್ದು ಈ ಮೂಲಕ ತಾನು ತೈವಾನ್ನ ಬಾಗಿಲ ಬಳಿ ತಲುಪಿದ್ದೇನೆ ಎಂಬ ಸಂದೇಶ ರವಾನಿಸಿತ್ತು. ಇದನ್ನು ನಿರಾಕರಿಸಿರುವ ಪೆಯ್ಲಿನ್, ಪೆಂಘು ದ್ವೀಪದ ಬಳಿ ತಲುಪಿದ್ದೇವೆ ಎಂಬ ಚೀನಾದ ಪ್ರತಿಪಾದನೆ, ಆ ದೇಶ ನಡೆಸುತ್ತಿರುವ ಅಸಾಂಪ್ರದಾಯಿಕ ಯುದ್ಧದ ಮತ್ತೊಂದು ವಿಧವಾಗಿದೆ ಎಂದಿದ್ದಾರೆ. 

ಚೀನಾವು ತೈವಾನ್ ಜಲಸಂಧಿಯಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯ ಮೇಲೆ ನಿಗಾ ಇರಿಸಲು ಮತ್ತು ಅಗತ್ಯಬಿದ್ದರೆ ಪ್ರತಿಕ್ರಿಯಿಸಲು ಯುದ್ಧ ವಾಯು ಗಸ್ತು ವ್ಯವಸ್ಥೆ, ಸೇನಾ ನೌಕೆ ಹಾಗೂ ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಿರುವುದಾಗಿ ತೈವಾನ್ನ ರಕ್ಷಣಾ ಇಲಾಖೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News