ಬಿಲ್ಕಿಸ್‌ ಬಾನು ಪ್ರಕರಣದ ಆರೋಪಿಗಳ ಬಿಡುಗಡೆ ಕುರಿತು ಸೋಮವಾರ ಚರ್ಚಿಸಲಿರುವ ಮಾನವ ಹಕ್ಕು ಆಯೋಗ: ವರದಿ

Update: 2022-08-21 10:32 GMT
Photo: Twitter

ಹೊಸದಿಲ್ಲಿ: 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು(Bilkis Bano) ಎಂಬ ಗರ್ಭಿಣಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ಆಕೆಯ ಕುಟುಂಬಸ್ಥರನ್ನು, ಪುಟ್ಟ ಮಗುವನ್ನು ಕೊಲೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 11 ಅಪರಾಧಿಗಳು ಗೋಧ್ರಾ ಉಪ-ಜೈಲಿನಿಂದ ಬಿಡುಗಡೆಯಾದ ಒಂದು ವಾರದ ನಂತರ, ರಾಷ್ಟ್ರೀಯ ಮಾನವ ಹಕ್ಕುಗಳ(National Human Rights Commission) ಆಯೋಗವು ಸೋಮವಾರ, ವಿಷಯವನ್ನು "ಚರ್ಚೆಗೆ" ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು indianexpress.com ವರದಿ ಮಾಡಿದೆ.

ಈ ಕುರಿತು, ಎನ್‌ಎಚ್‌ಆರ್‌ಸಿ ಅಧ್ಯಕ್ಷ ನ್ಯಾಯಮೂರ್ತಿ ಅರುಣ್ ಮಿಶ್ರಾ(Justice Arun Mishra) ಅವರ ಕಚೇರಿ ಇದನ್ನು ಖಚಿತಪಡಿಸಿದೆ.

ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್(Sabaramati Express) ಮೇಲೆ ದಾಳಿ ಮಾಡಿದ ನಂತರ ರಾಜ್ಯದಾದ್ಯಂತ ಭುಗಿಲೆದ್ದ ಹಿಂಸಾಚಾರದ ಸಂದರ್ಭದಲ್ಲಿ ದಾಹೋದ್‌ನಲ್ಲಿ 2002ರ ಮಾರ್ಚ್ 3ರಂದು ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳು ಮತ್ತು ಆಕೆಯ ಮೂರು ವರ್ಷದ ಮಗಳು ಸಲೇಹಾಳನ್ನು ಅಮಾನುಷವಾಗಿ ಕೊಲ್ಲಲಾಗಿತ್ತು.

2003 ರಲ್ಲಿ, ಗುಜರಾತ್ ಪೊಲೀಸರು ಪ್ರಕರಣವನ್ನು ಮುಚ್ಚಿದ ನಂತರ ಸುಪ್ರೀಂ ಕೋರ್ಟ್(Supreme Court) ಅನ್ನು ಸಂಪರ್ಕಿಸಲು ಬಿಲ್ಕಿಸ್‌ ಬಾನುವಿಗೆ ಕಾನೂನು ಸಹಾಯವನ್ನು ನೀಡುವಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಪ್ರಮುಖ ಪಾತ್ರ ವಹಿಸಿತ್ತು.

ಮಾರ್ಚ್ 2002 ರಲ್ಲಿ ಗೋಧ್ರಾದಲ್ಲಿನ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದಾಗ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ವರ್ಮಾ ನೇತೃತ್ವದ ಮಾನವ ಹಕ್ಕುಗಳ ಸಂಸ್ಥೆಯು ಅವರನ್ನು ಭೇಟಿ ಮಾಡಿತ್ತು. ಎನ್‌ಎಚ್‌ಆರ್‌ಸಿ ಹಿರಿಯ ವಕೀಲ ಮತ್ತು ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಅವರನ್ನು ಸುಪ್ರೀಂ ಕೋರ್ಟ್‌ಗೆ ಪ್ರತಿನಿಧಿಸಲು ನೇಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News