×
Ad

ಮಂಗಳೂರು: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ʼಟ್ಯಾಲೆಂಟ್‍ʼನಲ್ಲಿ ಪ್ರಶಸ್ತಿ ಪ್ರದಾನ

Update: 2022-08-21 21:23 IST

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಹಾಗೂ ಹಾಜಿ ಕೆ. ಎಸ್ ಸಯ್ಯದ್ ಕರ್ನಿರೆ ಚಾರಿಟೇಬಲ್ ಟ್ರಸ್ಟ್ ಇದರ ಸಂಹಯೋಗದಲ್ಲಿ ಮದ್ರಸ ಹಾಗೂ ಶಾಲಾ ಶಿಕ್ಷಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯಧಿಕ ಅಂಕ ಪಡೆದ 42 ವಿದ್ಯಾರ್ಥಿಗಳಿಗೆ “ಟ್ಯಾಲೆಂಟ್ ಮದ್ರಸ ಎಕ್ಷಲೆನ್ಸ್ ಮತ್ತು ಟ್ಯಾಲೆಂಟ್ ಎಕ್ಷಲೆನ್ಸ್ ಅವಾರ್ಡ್ 2022” ಪ್ರಶಸ್ತಿ ಪ್ರದಾನ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.

ಎಕ್ಸ್‌ಪರ್ಟೈಸ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷರಾದ ಕೆ.ಎಸ್ ಶೇಕ್ ಕರ್ನಿರೆ ಮಾತನಾಡಿ, ನಮ್ಮ ತಂದೆಯವರು ನಮಗೆ ಆಸ್ತಿ ಮಾಡಲಿಲ್ಲ, ಬದಲಾಗಿ ನಮ್ಮ ಎಲ್ಲಾ ಸಹೋದರರಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿದರು. ಇದರ ಕಾರಣದಿಂದ ನಾವು ಇಂದು 7 ಸಾವಿರಕ್ಕಿಂತಲೂ ಅಧಿಕ ನೌಕರರನ್ನು ಇಟ್ಟು ಇಂದು ನಾವು ಅಂತರಾಷ್ಟ್ರಿಯ ಮಟ್ಟದಲ್ಲಿ ನಮ್ಮ ಉದ್ಯಮೆ ಬೆಳೆಸಲು ಸಾಧ್ಯವಾಯಿತು ಎಂದು ತಿಳಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನ್ಯೂ ಭಾರತ್ ಇನ್ಫ್ರಾಸ್ಟ್ರಕ್ಚರ್ (infrastructure) ಮಾಲಕರಾದ ಎಸ್.ಎಮ್ ಮುಸ್ತಫ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್ ಇದರ ಮಾಲಕರಾದ ಡಾ. ಅಬ್ದುಲ್ ರವೂಫ್, ಎಕ್ಸ್‌ಪರ್ಟೈಸ್ ಸಂಸ್ಥೆಯ ಮ್ಯಾನೇಜರ್ ಶೇಖ್ ಮೊಯಿದಿನ್, ಪಾತ್‍ವೇ ಕನ್ಸ್ಟ್ರಕ್ಷನ್ (Construction) ಇದರ ಆಡಳಿತ ನಿರ್ದೇಶಕರಾದ ಮುನವ್ವರ್ ಅಹ್ಮದ್ ಮತ್ತು ಸರ್ಫೇಸ್ ಕೇರ್ ಇದರ ಮಾಲಕರಾದ ಅಖಿಲ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.

ಟಿಆರ್‌ಎಫ್ ಸಂಸ್ಥೆಯ ಅಧ್ಯಕ್ಷರಾದ ರಿಯಾಝ್ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೆ.ಎಸ್ ಶೇಕ್ ಕರ್ನಿರೆ ಇವರನ್ನು ಸನ್ಮಾನಿಸಲಾಯಿತು.

ಮದ್ರಸದಲ್ಲಿ 5 ನೇ ತರಗತಿಯ 8 ವಿದ್ಯಾರ್ಥಿಗಳು, 7ನೇ ತರಗತಿಯ 7, 10ನೇ ತರಗತಿಯ 7 ಮತ್ತು 12ನೇ ತರಗತಿಯ 3 ಮತ್ತು ಶಾಲಾ ವಿಭಾಗದ ಎಸೆಸೆಲ್ಸಿಯಲ್ಲಿ 7, ಪಿ.ಯುಸಿ ವಿಜ್ಞಾನ ವಿಭಾಗದ 3, ವಾಣಿಜ್ಯ ವಿಭಾಗದ 3 ಮತ್ತು ಕಲಾ ವಿಭಾಗದ 3 ವಿದ್ಯಾರ್ಥಿಗಳು ಸೇರಿ ಒಟ್ಟು 42 ಮಂದಿ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ನಗದು ನೀಡಿ ಅಭಿನಂದಿಸಲಾಯಿತು.

ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು, ಪೋಷಕರು ಮತ್ತು ಅವರ ಮದ್ರಸ ಅದ್ಯಾಪಕರು ಅನಿಸಿಕೆಗಳನ್ನು ಹಂಚಿಕೊಂಡರು. ಟಿಆರ್‌ಎಫ್ ಸಲಹೆಗಾರ ಅಬ್ದುಲ್ ಸಲಾಂ ಮುಸ್ಲಿಯಾರ್ ಪೆರ್ನೆ ಕಿರಾಅತ್ ಪಠಿಸಿದರು. ಅಬ್ದುಲ್ ಮಜೀದ್ ತುಂಬೆ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳ ಪ್ರಶಸ್ತಿ ನಿರ್ವಹಣೆಯನ್ನು  ನಕಾಶ್ ಬಾಂಬಿಲ ಮತ್ತು ಮದ್ರಸ ವಿದ್ಯಾರ್ಥಿಗಳ ಪ್ರಶಸ್ತಿ ನಿರ್ವಹಣೆಯನ್ನು ಜಸೀಮ್ ಸಜಿಪ ನಡೆಸಿಕೊಟ್ಟರು. ಅಬ್ದುಲ್ ಹಮೀದ್ ಕಣ್ಣೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News