ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ವತಿಯಿಂದ ಮಮತೆಯ ತೊಟ್ಟಿಲು ಆಶ್ರಮಕ್ಕೆ ಭೇಟಿ
Update: 2022-08-22 18:17 IST
ಉಡುಪಿ, ಆ.22: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ವತಿಯಿಂದ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಗೋಪಾಲಪುರ ದಲ್ಲಿರುವ ಕೃಷ್ಣಾನುಗ್ರಹ ಅರ್ಹ ಸಂಸ್ಥೆ ಮತ್ತು ದತ್ತು ಸ್ವೀಕಾರ ಕೇಂದ್ರ ಮಮತೆಯ ತೊಟ್ಟಿಲು ಎಂಬ ಪುಟಾಣಿ ಮಕ್ಕಳ ಆಶ್ರಮಕ್ಕೆ ಭೇಟಿ ನೀಡಲಾಯಿತು.
ವೇದಿಕೆ ಅಧ್ಯಕ್ಷ ಜನಾಬ್ ಎಂ.ಎಸ್. ಖಾನ್, ಉಪಾಧ್ಯಕ್ಷ ರೋಬರ್ಟ್ ಮಿನೇಜಸ್, ಕಾರ್ಯದರ್ಶಿ ಸಿರಿಲ್ ಮೊಂತೆರೋ ಇವರೊಂದಿಗೆ ಮಾಜಿ ಕೇಂದ್ರೀಯ ಅಧ್ಯಕ್ಷರು ಹಾಗೂ ಅನೇಕ ಸದಸ್ಯರು ಉಪಸ್ಥಿತರಿದ್ದರು.
ಆಶ್ರಮಕ್ಕೆ ವೇದಿಕೆಯ ವತಿಯಿಂದ 15,000 ರೂ. ವೌಲ್ಯದ ಮಕ್ಕಳ ಸಾಮಾಗ್ರಿಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ಹಸ್ತಾಂತರಿಸಲಾಯಿತು. ಆಶ್ರಮದ ಮೇಲ್ವಿಚಾರಕಿ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.