ಮಣಿಪಾಲದಲ್ಲೊಂದು ಬೃಹತ್ ಗಾತ್ರದ 3-ಡಿ ಸೊಳ್ಳೆ !
Update: 2022-08-22 19:11 IST
ಮಣಿಪಾಲ(Manipal), ಆ.22: ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಕಲಾವಿದರಾದ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೆಬೆಟ್ಟು ಇವರು ಮಾಹೆಯ ಇಂಟರಾಕ್ಟ್ ಆವರಣದಲ್ಲಿ ಡೆಂಗಿ, ಮಲೇರಿಯಾ ಇನ್ನಿತರ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದು ಬೃಹತ್ ಗಾತ್ರದ ಸೊಳ್ಳೆಯ ಕಲಾಕೃತಿಯನ್ನು ರಚಿಸಿದರು.
ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಕಲಾಕೃತಿಯನ್ನು ಅನಾವರಣಗೊಳಿಸಿ ಮಾತನಾಡಿ, ಸೊಳ್ಳೆಯು ಮಾನವ ಕುಲಕ್ಕೆ ಅತೀ ಅಪಾಯಕಾರಿಯಾಗಿದ್ದು, ಇವುಗಳು ಹರಡುವ ರೋಗಗಳಿಂದ ವಿಶ್ವದಾದ್ಯಂತ ಪ್ರತಿವರ್ಷ ಲಕ್ಷಾಂತರ ಜನರು ಬಲಿಯಾಗುತ್ತಿದ್ದಾರೆ ಎಂದು ವಿವರಿಸಿದರು.
ಸೊಳ್ಳೆಗಳು ಮಳೆಗಾಲದಲ್ಲಿ ಹರಡುವ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ 3-ಡಿ ಕಲಾಕೃತಿಯನ್ನು ರಚಿಸಲಾಗಿದೆ ಎಂದು ಕಲಾವಿದರು ತಿಳಿಸಿದರು.
ಇದನ್ನೂ ಓದಿ: ಮಂಗಳೂರು| ತಪ್ಪಿಸಲು ಯತ್ನಿಸಿದ ಆರೋಪಿಗೆ ಗುಂಡೇಟು