ಶ್ರೀಲಂಕಾದ ಸಾಲಗಾರರಿಂದ ಭರವಸೆಯ ಅಗತ್ಯವಿದೆ: ಐಎಂಎಫ್

Update: 2022-08-22 17:50 GMT

ನ್ಯೂಯಾರ್ಕ್, ಆ.೨೨: ಶ್ರೀಲಂಕಾಕ್ಕೆ ಯಾವುದೇ ರೀತಿಯ ಹೊಸ ಯೋಜನೆ ಘೋಷಿಸುವುದಕ್ಕೂ ಮೊದಲು  ಆ ದೇಶಕ್ಕೆ ಸಾಲ ನೀಡಿದವರ ಭರವಸೆಯ ಅಗತ್ಯವಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎAಎಫ್) ಹೇಳಿದೆ.

ಐಎಂಎಫ್ನ ಅಧಿಕಾರಿಗಳು ಆಗಸ್ಟ್ ೨೪ರಿಂದ ೩೧ರವರೆಗೆ  ಶ್ರೀಲಂಕಾಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ಮುಂದಿನ ದಿನಗಳಲ್ಲಿ ದ್ವೀಪ ರಾಷ್ಟ್ರಕ್ಕೆ ತೀವ್ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭ ಸಹಾಯ ಮಾಡಲು,  ಸಿಬ್ಬಂದಿ ಮಟ್ಟದ ಒಪ್ಪಂದವನ್ನು ನೆರವಿನ ಪ್ಯಾಕೇಜ್ ರೂಪಕ್ಕೆ ಪರಿವರ್ತಿಸುವ ಪ್ರಕ್ರಿಯೆಗೆ ಚಾಲನೆ ನೀಡುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ ಎಂದು ಐಎಂಎಫ್ ಶುಕ್ರವಾರ ಹೇಳಿದೆ.


ಶ್ರೀಲಂಕಾದ ಸಾರ್ವಜನಿಕ ಸಾಲವು ಸಮರ್ಥನೀಯವಲ್ಲ ಎಂದು ನಿರ್ಣಯಿಸಲ್ಪಟ್ಟಿರುವುದರಿಂದ , ಐಎಂಎಫ್ನ  ವಿಸ್ತೃತ ನಿಧಿ ಸೌಲಭ್ಯದ ಕಾರ್ಯನಿರ್ವಾಹಕ ಮಂಡಳಿಗೆ ಶ್ರೀಲಂಕಾದ ಸಾಲಗಾರರು  ಸಾಲದ ಸಮರ್ಥನೀಯತೆಯನ್ನು ಮರುಸ್ಥಾಪಿಸುವ ಭರವಸೆ ನೀಡುವ ಅಗತ್ಯವಿದೆ ಎಂದು ಐಎಂಎಫ್ ಹೇಳಿದೆ. 
ಶ್ರೀಲಂಕಾದ ಸಾಲ ಪುರ್ರಚನೆಯ ಪ್ರಕ್ರಿಯೆಯಲ್ಲಿ ಜಪಾನ್ , ಚೀನಾ ಮತ್ತು ಭಾರತವನ್ನು ಮುಖ್ಯ ಸಾಲಗಾರರೆಂದು ಪರಿಗಣಿಸುವುದಾಗಿ ಕಳೆದ ವಾರ ಐಎಂಎಫ್ ಘೋಷಿಸಿದೆ. ಐಎಂಎಫ್ನಿಂದ ೨ ಬಿಲಿಯನ್ನಿಂದ ೩ ಬಿಲಿಯನ್ನಷ್ಟು ಸಾಲವನ್ನು ಎದುರು ನೋಡುವುದಾಗಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News