×
Ad

ಕಾಂಚನ ಹೋಂಡಾ: ಆ್ಯಕ್ಟಿವಾ ಪೆ ಆ್ಯಕ್ಟಿವಾ ಮೆಗಾ ಮಾನ್ಸೂನ್ ಆಫರ್‌ನ ಬಂಪರ್ ಡ್ರಾ

Update: 2022-08-23 00:10 IST

ಮಂಗಳೂರು, ಆ.22: ಹೋಂಡಾ ದ್ವಿಚಕ್ರ ವಾಹನ ಮಾರಾಟ ಹಾಗೂ ಸೇವೆ ನೀಡುತ್ತಿರುವ ಕಾಂಚನ ಮೋಟಾರ್ಸ್‌ನ ಅಂಗ ಸಂಸ್ಥೆ ಕಾಂಚನ ಹೋಂಡಾವು ಜುಲೈಯಲ್ಲಿ ಮಂಗಳೂರಿನಲ್ಲೇ ಪ್ರಥಮ ಬಾರಿಗೆ ‘ಆ್ಯಕ್ಟಿವಾ ಪೆ ಆ್ಯಕ್ಟಿವಾ ಮೆಗಾ ಮಾನ್ಸೂನ್ ಆಫರನ್ನು ಪರಿಚಯಿಸಿತ್ತು.

ಈ ಕೊಡುಗೆಯ ಪ್ರಕಾರ ಗ್ರಾಹಕರು ತಮ್ಮ ನೆಚ್ಚಿನ ಹೋಂಡಾ ದ್ವಿಚಕ್ರ ವಾಹನ ಖರೀದಿ ಸಿದಲ್ಲಿ ಬಂಪರ್ ಬಹುಮಾನವಾಗಿ ಆ್ಯಕ್ಟಿವಾ 6ಜಿ ಗೆಲ್ಲುವ ಸದವಕಾಶವಿತ್ತು. ಇದಲ್ಲದೆ ಈ ಕೊಡುಗೆಯ ಸಮಯದಲ್ಲಿ ಪ್ರತೀ ವಾರ ನಡೆ ಯುತ್ತಿರುವ ಲಕ್ಕೀ ಡ್ರಾದಲ್ಲಿ ಅನೇಕ ಗ್ರಾಹಕರು ಮೇಲಿನ ಕೊಡುಗೆಗಳನ್ನು ಹೊರತು ಪಡೆಸಿ, ವಿವಿಧ ಬಹುಮಾನವನ್ನು ಗೆದ್ದಿದ್ದಾರೆ.

ಹಲವು ವಾರಗಳಿಂದ ನಡೆದ ವೀಕ್ಲೀ ಲಕ್ಕೀ ಡ್ರಾದಲ್ಲಿ ಮಡಿಕೇರಿ ಮೂಲದ ಗ್ರಾಹಕ ಪಿ.ಎಂ.ಸದಾಲಿ, ಬಂಟ್ವಾಳದ ಕೆ.ದಿವಾಕರ್, ಕಾಟಿಪಳ್ಳದ ತಸ್ಲೀಮ್ ಆರಿಫ್, ಮಂಗಳೂರಿನ ರೊನಾಲ್ಡ್ ಕೋಯಲ್ಲೊ ಹಾಗೂ ಸಿದ್ದೀಕ್ ಹಸನಬ್ಬ ಎಂಬವರು ಸ್ಯಾಮ್‌ಸಂಗ್ ಆ್ಯಂಡ್ರಾಯ್ಡಾ ಮೊಬೈಲ್ ಫೋನನ್ನು ಹಾಗೂ ಬಂಪರ್ ಬಹುಮಾನ ಆ್ಯಕ್ಟಿವಾ 6ಜಿಯನ್ನು ಮಂಗಳೂರಿನ ಮುಹಮ್ಮದ್ ಹನೀಫ್ ಎಂಬವರು ಗೆದ್ದಿದ್ದಾರೆ.

ಕಾಂಚನ ಮೋಟಾರ್ಸ್‌ ಅಂಗಸಂಸ್ಥೆಯ ಆಡಳಿತ ನಿರ್ದೇಶಕ ಪ್ರಸಾದ್‌ರಾಜ್ ಕಾಂಚನ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಬಹುಮಾನ ಸ್ವೀಕರಿಸಿ ಮಾತನಾಡಿದ ಮುಹಮ್ಮದ್ ಹನೀಫ್, ಬಹಳ ದಿನಗಳಿಂದ ಹೋಂಡಾ ದ್ವಿಚಕ್ರ ವಾಹನ ಹೊಂದುವ ಬಯಕೆಯನ್ನು ಕಾಂಚನ ಹೋಂಡಾ ನನಸಾಗಿಸಿದೆ. ಇದಲ್ಲದೆ ಬಂಪರ್ ಡ್ರಾನಲ್ಲಿ ಮತ್ತೊಂದು ಸ್ಕೂಟರ್ ಗೆದ್ದಿರುವುದು ಸಂತಸ ತಂದಿದೆ ಎಂದರು.

ಮುಖ್ಯ ಅತಿಥಿ ರಾಜಾರಾಂ ಭಾರದ್ವಾಜ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಗ್ರಾಹಕರು ಕೇವಲ 1 ರೂ. ಮುಂಗಡ ಪಾವತಿಸಿ ತಮ್ಮ ನೆಚ್ಚಿನ ಹೋಂಡಾ ಸ್ಕೂಟರನ್ನು ಮನೆಗೊಯ್ಯಬಹುದು. ಅದೇ ರೀತಿ ತಮ್ಮ ಯಾವುದೇ ಹಳೇ ದ್ವಿಚಕ್ರ ವಾಹನವನ್ನು ಹೋಂಡಾ ದ್ವಿಚಕ್ರ ವಾಹನದೊಂದಿಗೆ ವಿನಿಮಯಿಸಿ ಮಾರುಕಟ್ಟೆಗಿಂತ ಹೆಚ್ಚಿನ ಮೌಲ್ಯ ಪಡೆಯಬಹುದು. ಗ್ರಾಹಕರ ಬೇಡಿಕೆಯ ಮೇರೆಗೆ ಶೇ.0 ವಿಶೇಷ ರಿಯಾಯತಿ ಬಡ್ಡಿದರದಲ್ಲಿ ಸಾಲ ಮಂಜೂರಾತಿ ಮಾಡಿ ಕೊಡಲಾಗುವುದು. ಅತೀ ಕಡಿಮೆ ದಾಖಲಾತಿಗಳೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಹೋಂಡಾ ದ್ವಿಚಕ್ರ ವಾಹನಗಳನ್ನು ಖರೀದಿಸಿದ ಎಲ್ಲಾ ಗ್ರಾಹಕರಿಗೆ ಖಚಿತವಾದ ಉಡುಗೊರೆಯಾಗಿ ಹೆಲ್ಮೆಟ್, ರೈನ್ ಕೋಟ್, ಮಗ್, ಬ್ರಾಂಡೆಡ್ ಟೀ ಶರ್ಟ್‌ಗಳಂತಹ ಉಡುಗೊರೆಗಳನ್ನು ನೀಡಲಾಗುವುದು ಹಾಗೂ ಎಲ್ಲಾ ಗ್ರಾಹಕರು ಬ್ರಾಂಡೆಡ್ ಶರ್ಟ್, ಬೋಟ್ ಏರ್‌ಪೋಡ್ಸ್ ಹಾಗೂ ಜೆಬಿಎಲ್ ಇನ್ಫಿನಿಟಿ ಸ್ಪೀಕರನ್ನು ವೀಕ್ಲೀ ಡ್ರಾದಲ್ಲಿ ಗೆಲ್ಲಬಹುದಾಗಿದೆ.

ಈ ಕೊಡುಗೆಗಳು ಹೋಂಡಾ ಆಕ್ವೀವಾ 6ಜಿ, ಡಿಯೋ, ಆಕ್ವೀವಾ 125, ಗ್ರಾಸಿಯ 125, ಯುನಿಕಾರ್ನ್, ಶೈನ್, ಸಿಡಿ 110 ಹಾಗೂ ಎಸ್ಪಿ 125ಯ ವಿವಿಧ ಮೋಡೆಲ್‌ಗಳಿಗೆ ಲಭ್ಯವಿದೆ. ಗ್ರಾಹಕರು ಹೋಂಡಾ ದ್ವಿಚಕ್ರ ವಾಹನಗಳ ಆಫರ್ ಹಾಗೂ ಟೆಸ್ಟ್ ರೈಡ್‌ಗಾಗಿ ಇಂದೇ ಜಿಲ್ಲೆಯ ಮಂಗಳೂರು, ಕಾವೂರು, ತೊಕ್ಕೊಟ್ಟು, ಬಿ.ಸಿ.ರೋಡ್, ಸಿದ್ಧಕಟ್ಟೆ, ವಿಟ್ಲ, ಮಾಣಿ ಹಾಗೂ ಮುಡಿಪು ಶಾಖೆಗಳನ್ನು ಸಂಪರ್ಕಿಸಬಹುದು ಅಥವಾ ಮೊ.ಸಂ.: 7829789777ಗೆ ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News