×
Ad

ದೇಶಭಕ್ತಿ ಗಾಯನ ಸ್ಪರ್ಧೆ; ಕಾವು ಬುಶ್ರಾ ಸ್ಕೂಲ್ ವಿದ್ಯಾರ್ಥಿಗಳಾದ ಹಫೀಝ್, ಆರಾಧ್ಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

Update: 2022-08-23 17:56 IST

ಪುತ್ತೂರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಸೂಚನೆಯಂತೆ ವರ್ಷಂಪ್ರತಿ ಆಚರಿಸುವಂತೆ ಪುತ್ತೂರು ಸ್ಥಳೀಯ ಸಂಸ್ಥೆಯ ದೇಶಭಕ್ತಿ ಗೀತಗಾಯನ ಸ್ಪರ್ದೆಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಳುವಾರು ಇಲ್ಲಿ ಆಗಸ್ಟ್ 21 ರಂದು ನಡೆಯಿತು.

ಭಾಗವಹಿಸಿದ ಒಟ್ಟು 40 ತಂಡಗಳಲ್ಲಿ ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಇಲ್ಲಿಯ ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿ ಗಳಾದ ಇಬ್ರಾಹೀಂ ಹಫೀಝ್ ಹಾಗೂ ಆರಾಧ್ಯ ಪಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ‌.

ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾದ ವಿದ್ಯಾರ್ಥಿ ಗಳಿಗೆ ಕಬ್ ಮಾಸ್ಟರ್ ಹೇಮಲತಾ ಕಜೆ ತರಬೇತಿ ನೀಡಿದ್ದರು. ಆಯ್ಕೆ ಯಾದ ಇಬ್ರಾಹೀಂ ಹಫೀಝ್ ಮೊಯ್ದಿನ್ ಕುಂಞಿ, ಬೀಫಾತಿಮ ದಂಪತಿಯ ಪುತ್ರ ಹಾಗೂ ಆರಾಧ್ಯ ರವಿರಾಜ ಬೋರ್ಕರ್ , ಹೇಮಾಮಾಲಿನಿ ಟಿ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News