ಝಿಂಬಾಬ್ವೆಗೆ 50 ಟನ್ ಆಹಾರ ನೆರವು ರವಾನಿಸಿದ ಯುಎಇ

Update: 2022-08-23 17:01 GMT

ದುಬೈ, ಆ.೨೩: ಝಿಂಬಾಬ್ವೆಗೆ 50 ಟನ್‌ನಷ್ಟು ಆಹಾರದ ನೆರವನ್ನು ಮಂಗಳವಾರ ವಿಮಾನದ ಮೂಲಕ ರವಾನಿಸಲಾಗಿದೆ ಎಂದು ಯುಎಇ ಹೇಳಿದೆ.

ಆ ದೇಶದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರಂತಹ ದುರ್ಬಲ ವರ್ಗ ಸೇರಿದಂತೆ ಸಾವಿರಾರು ಕುಟುಂಬಗಳ  ಅಗತ್ಯವನ್ನು ಇದು ಪೂರೈಸುತ್ತದೆ. ರಿಪಬ್ಲಿಕನ್ ಆಫ್ ಝಿಂಬಾಬ್ವೆಗೆ ಆಹಾರ ಪದಾರ್ಥಗಳನ್ನು ರವಾನಿಸಿರುವುದು ಉಭಯ ದೇಶಗಳ ನಡುವಿನ ಬಲವಾದ ಸಂಬAಧವನ್ನು ಪ್ರತಿಬಿಂಬಿಸುತ್ತದೆ ಮತ್ತು ಆಫ್ರಿಕನ್ ದೇಶಗಳನ್ನು ಬೆಂಬಲಿಸಲು, ಅವರು ಎದುರಿಸುತ್ತಿರುವ ಮಾನವೀಯ ಬಿಕ್ಕಟ್ಟುಗಳನ್ನು ನಿವಾರಿಸಲು ಯುಎಇ ನಿರ್ವಹಿಸಿದ ಮಾನವೀಯ ಪಾತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಝಿಂಬಾಬ್ವೆಗೆ ಯುಎಇ ರಾಯಭಾರಿ ಜಾಸ್ಸಿಂ ಮುಹಮ್ಮದ್ ಅಲ್ ಖಾಸಿಮಿಯನ್ನು ಉಲ್ಲೇಖಿಸಿ ಯುಎಇಯ ಸುದ್ಧಿಸಂಸ್ಥೆ ವರದಿ ಮಾಡಿದೆ. ಕೋವಿಡ್ ಸಾಂಕ್ರಾಮಿಕವನ್ನು ಹತ್ತಿಕ್ಕಲು ಯುಎಇ ರವಾನಿಸಿದ್ದ ವೈದ್ಯಕೀಯ ನೆರವಿನ ಫಲಾನುಭವಿಗಳ ಪಟ್ಟಿಯಲ್ಲೂ ಝಿಂಬಾಬ್ವೆ ಮೊದಲ ಸ್ಥಾನದಲ್ಲಿತ್ತು. ಯುಎಇ ರವಾನಿಸಿದ್ದ ನೆರವಿನ ಪ್ರಯೋಜನವನ್ನು  ಆ ದೇಶದ ೮೦೦೦ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರು ಪಡೆದಿದ್ದಾರೆ ಎಂದು ಖಾಸಿಮಿ ಹೇಳಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News