×
Ad

ಆ.26ರಂದು ದ.ಕ. ಫ್ಲವರ್ ಡೆಕೊರೇಟರ್ಸ್ ಮಾಲಕರ ಸಂಘ ಉದ್ಘಾಟನೆ

Update: 2022-08-24 15:48 IST
ಸಾಂದರ್ಭಿಕ ಚಿತ್ರ

ಮಂಗಳೂರು, ಆ.24: ದಕ್ಷಿಣ ಕನ್ನಡ ಫ್ಲವರ್ ಡೆಕೊರೇಟರ್ಸ್ ಮಾಲಕರ ಶ್ರೇಯೋಭಿವೃದ್ಧಿಗಾಗಿ ಪ್ರಾರಂಭಗೊಂಡ ದ.ಕ. ಫ್ಲವರ್ ಡೆಕೊರೇಟರ್ಸ್ ಮಾಲಕರ ಸಂಘದ ಉದ್ಘಾಟನಾ ಸಮಾರಂಭ ಆ.26ರಂದು ಸಂಜೆ 4 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.

ಶಾಸಕ ಡಿ.ವೇದವ್ಯಾಸ ಕಾಮತ್ ಸಂಘವನ್ನು ಉದ್ಘಾಟಿಸಲಿದ್ದಾರೆ. ಸಂಘದ ಲಾಂಛನವನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅನಾವರಣಗೊಳಿಸಲಿದ್ದಾರೆ. ಸಂಘದ ಗೌರವಾಧ್ಯಕ್ಷ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಮೇಯರ್ ಪ್ರೇಮಾನಂದ ಶೆಟ್ಟಿ, ಚಲನಚಿತ್ರ ನಟ ದೇವದಾಸ್ ಕಾಪಿಕಾಡ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿದರು.

ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದ ನಟ ದೇವದಾಸ್ ಕಾಪಿಕಾಡ್ ಮತ್ತು ಡೆಕೋರೇಶನ್ ಕ್ಷೇತ್ರದ ಹಿರಿಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.

ಸಭಾ ಕಾರ್ಯಕ್ರಮದ ಬಳಿಕ ಮಸ್ಕಿರಿ ಕುಡ್ಲ ತಂಡದ ವತಿಯಿಂದ 'ತೆಲಿಕೆ ಬಂಜಿ ನಿಲಿಕೆ' ಎಂಬ ತುಳು ಹಾಸ್ಯ ಕಾರ್ಯಕ್ರಮ, ಆರ್ಯನ್ ಡ್ಯಾನ್ಸ್ ಸ್ಟುಡಿಯೋ ಹಾಗೂ ಡ್ರೀಮ್ ಬಾಯ್ಸ ಕಾವೂರು ತಂಡದಿಂದ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಘದಲ್ಲಿ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ 800ಕ್ಕೂ ಅಧಿಕ ಸದಸ್ಯರಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಉಮೇಶ್, ಪ್ರಧಾನ ಕಾರ್ಯದರ್ಶಿ ಸುಲಕ್ಷಣ್ ಬಿ. ರೈ, ಕೋಶಾಧಿಕಾರಿ ವಿಲ್ಫ್ರೆಡ್ ಪಿಂಟೋ, ಸದಸ್ಯ ಲಕ್ಷ್ಮಿ ನಾರಾಯಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News