×
Ad

ಮಂಗಳೂರು; 'ಏಸ್' ಅಕಾಡಮಿ ವತಿಯಿಂದ ಐಎಎಸ್ ತರಬೇತಿ ಕಾರ್ಯಕ್ರಮಕ್ಕೆ ಸ್ಕಾಲರ್ಶಿಪ್ ಪ್ರವೇಶ ಪರೀಕ್ಷೆ

Update: 2022-08-24 18:00 IST

ಮಂಗಳೂರು, ಆ. 24: ನಗರದ 'ಏಸ್' ಐ.ಎ.ಎಸ್ ಅಕಾಡಮಿ 2022- 23ನೇ ಸಾಲಿನ ಐ.ಎ.ಎಸ್ ತರಬೇತಿ ಕಾರ್ಯಕ್ರಮಕ್ಕೆ ಸ್ಕಾಲರ್ಶಿಪ್ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ. 

ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್ (IAS, IPS, KAS) ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯ ಬಯಸುವ ಆಕಾಂಕ್ಷಿಗಳು (ಪದವೀದರರು ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು) ಈ ಸ್ಕಾಲರ್ಶಿಪ್ ಪರೀಕ್ಷೆಯನ್ನು ಬರೆಯಬಹುದಾಗಿದೆ.

ಆರ್ಥಿಕವಾಗಿ ಹಿಂದುಳಿದ ಅರ್ಹ ಆಕಾಂಕ್ಷಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಶುಲ್ಕ ರಿಯಾಯಿತಿ ಒದಗಿಸುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಪ್ರವೇಶ ಪರೀಕ್ಷೆಯು 27/08/2022 ರಂದು ಮಧ್ಯಾಹ್ನ 2:30ಕ್ಕೆ ನಗರದ M.G ರಸ್ತೆಯ ಎಂಪೈರ್ ಮಾಲ್ ಎದುರುಗಡೆ ಇರುವ 'ಏಸ್' ಐಎಎಸ್ ಅಕಾಡಮಿಯಲ್ಲಿ ಹಾಗೂ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರುಗಡೆ ಇರುವ ಪುತ್ತೂರು ಕಮ್ಯುನಿಟಿ ಸೆಂಟರ್ (ಶಾಲಿಮಾರ್ ಕಾಂಪ್ಲೆಕ್ಸ್) ನಲ್ಲಿ ನಡೆಯಲಿರುವುದು.

ಆಸಕ್ತರು ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಮೊಬೈಲ್ ಸಂಖ್ಯೆ 7090109997 ಸಂಪರ್ಕಿಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News