×
Ad

ಕಾಟಿಪಳ್ಳ: ರಿಲಯನ್ಸ್ ಯೂತ್ ಅಸೋಸಿಯೇಶನ್‌ನಿಂದ ಸನ್ಮಾನ

Update: 2022-08-24 20:13 IST

ಮಂಗಳೂರು:ಕಾಟಿಪಳ್ಳದ ರಿಲಯನ್ಸ್ ಯೂತ್ ಅಸೋಸಿಯೇಶನ್ ಕಾಟಿಪಳ್ಳ ಜಂಕ್ಷನ್‌ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ 2021-22ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 625 ಅಂಕ ಗಳಿಸಿದ ಕಾಟಿಪಳ್ಳದ ಆಬಿದ್ ಅಲಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ರಿಲಯನ್ಸ್ ಓವರ್ಸೀಸ್ ಅಧ್ಯಕ್ಷ ಇಮ್ತಿಯಾಝ್, ಡಿವೈಎಫ್‌ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ನೂರುಲ್ ಹುದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬದ್ರುದ್ದೀನ್ ಪಣಂಬೂರು, ರಿಲಯನ್ಸ್ ಮಾಜಿ ಉಪಾಧ್ಯಕ್ಷ ಅಬೂಬಕ್ಕರ್, ಪಣಂಬೂರು ಮುಸ್ಲಿಂ ಜಮಾತ್ ಅಧ್ಯಕ್ಷ ಅಹ್ಮದ್ ಬಾವ ಅಯ್ಯೂಬ್, ರೂಫ್ ಟೆಕ್ ಇಂಡಸ್ಟ್ರಿಯಲ್ ಸರ್ವಿಸ್‌ನ ಮಾಲಕ ನಕ್ಕೀಸ್ ಅರಬಿ, ಕೆಎಂವೈಎ ದಮಾಮ್ ಘಟಕದ ಉಪಾಧ್ಯಕ್ಷ ಮುಸ್ತಫ, ರಿಯಾದ್ ಘಟಕದ ಅಧ್ಯಕ್ಷ ಜಬ್ಬಾರ್ ಅನ್ವರ್, ಹವ್ವಾ ಫೌಂಡೇಶನ್ ಅಧ್ಯಕ್ಷ ರೆಡೆಕ್ ಬಾವಾ, ರಿಲಯನ್ಸ್ ಓವರ್ಸೀಸ್‌ನ ಕಾರ್ಯದರ್ಶಿ ಮೊಹ್ಶಿನ್, ಇಬ್ರಾಹಿಂ ಕತರ್, ಆಸಿಫ್ ಭಾಗವಹಿಸಿದ್ದರು.

ರಿಲಯನ್ಸ್ ಯೂತ್ ಅಸೋಸಿಯೇಶನ್ ಅಧ್ಯಕ್ಷ ವಾಸಿಮ್ ಅಧ್ಯಕ್ಷತೆ ವಹಿಸಿದ್ದರು. ಹುಸೈನ್ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News