ಅನಧಿಕೃತ ನಿವಾಸಿಗಳ ಮಕ್ಕಳನ್ನು ಶಾಲೆಗೆ ದಾಖಲಿಸಲು ಅವಕಾಶ: ಸೌದಿ ಅರೇಬಿಯಾ ಘೋಷಣೆ

Update: 2022-08-24 17:01 GMT

ರಿಯಾದ್, ಆ.೨೪: ಹೊಸ ಶೈಕ್ಷಣಿಕ ವರ್ಷದಲ್ಲಿ ಅನಧಿಕೃತ ನಿವಾಸಿಗಳ ಮಕ್ಕಳನ್ನು ಶಾಲೆಗೆ ಸೇರಿಸಲು ಅವಕಾಶ ನೀಡುವುದಾಗಿ ಸೌದಿ ಅರೆಬಿಯಾದ ಶಿಕ್ಷಣ ಇಲಾಖೆ ಮಂಗಳವಾರ ಪ್ರಕಟಿಸಿದೆ ಎಂದು ಟಿವಿ ಸುದ್ಧಿವಾಹಿನಿ ಅಲ್ ಅರೇಬಿಯಾ ವರದಿ ಮಾಡಿದೆ.

ಅಧಿಕೃತ ನಿವಾಸಿಗಳ ಸ್ಥಾನಮಾನವಿಲ್ಲದೆ ದೇಶದಲ್ಲಿ ವಾಸಿಸುತ್ತಿರುವ ಪೋಷಕರಿಗೆ ನೂತನ ಶೈಕ್ಷಣಿಕ ವರ್ಷದಲ್ಲಿ  ಶಾಲೆಗಳು ಪ್ರವೇಶ ನಮೂನೆಗಳನ್ನು ಒದಗಿಸಬೇಕು ಮತ್ತು ಅವರು ವಾಸಿಸುತ್ತಿರುವ ಪ್ರದೇಶದಲ್ಲಿ ಶಿಕ್ಷಣ ಸಚಿವಾಲದ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಬೇಕು. ಒಮ್ಮೆ ಅನುಮೋದಿಸಿದ ಬಳಿಕ , ದಾಖಲಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಪ್ರವೇಶ ನಮೂನೆಗಳನ್ನು ಸಂಬಂಧಿತ ಶಾಲಾ ಆಡಳಿತಕ್ಕೆ ಸಲ್ಲಿಸಬೇಕು  ಎಂದು ವರದಿ ತಿಳಿಸಿದೆ.

ಪ್ರತೀ ಶೈಕ್ಷಣಿಕ ಜಿಲ್ಲೆಯಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯ ಕುರಿತು ಮಾಸಿಕ ಅಂಕಿಅಂಶಗಳ ವರದಿಯೊಂದಿಗೆ ಮೌಲ್ಯಮಾಪನ ಮತ್ತು ಪ್ರವೇಶಾವಕಾಶ ಒದಗಿಸಲು ಶಿಕ್ಷಣ ಇಲಾಖೆಯು ದೇಶದಾದ್ಯಂತದ ಶಿಕ್ಷಣ ಇಲಾಖೆಗಳಿಗೆ ಸೂಚಿಸಿದೆ. ಸರಿಯಾದ ದಾಖಲೆಗಳನ್ನು ಹೊಂದಿರದೆ ದೇಶದಲ್ಲಿ ವಾಸಿಸುತ್ತಿರುವವರು ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸಲು ಮಗುವಿನ ಅಧಿಕೃತ ದಾಖಲೆ, ಪೋಷಕರ ದಾಖಲೆ(ಪಾಸ್ಪೋರ್ಟ್, ರೆಸಿಡೆನ್ಸಿ ಪರ್ಮಿಟ್, ವಿಸಿಟ್  ವೀಸಾ ಇತ್ಯಾದಿ), ಶಾಶ್ವತ ವಿಳಾಸ ಮತ್ತು ಸಂಪರ್ಕದ ಮಾಹಿತಿಯನ್ನು ಒದಗಿಸಬೇಕು.

ಅನಧಿಕೃತ ಸ್ಥಾನಮಾನ ಹೊಂದಿರುವ ಪಾಲಕರು ಈ ವರ್ಷ ತಮ್ಮ ಸ್ಥಾನಮಾನವನ್ನು ಸರಿಪಡಿಸುವುದಾಗಿ ಘೋಷಿಸುವ ದಾಖಲೆಯನ್ನು ಒದಗಿಸಬೇಕು ಎಂದು ವರದಿಯಲ್ಲಿ ವಿವರಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News