ಸಿರಿಯಾದಲ್ಲಿ ಇರಾನ್ ಬೆಂಬಲಿತ ಪಡೆಯ ಮೇಲೆ ಅಮೆರಿಕ ವಾಯುದಾಳಿ
ವಾಷಿಂಗ್ಟನ್, ಆ.೨೪: ಸಿರಿಯಾದ ಡಯರ್ ಎಝೋರ್ ಪ್ರಾಂತದಲ್ಲಿ ಕಾರ್ಯಾಚರಿಸುತ್ತಿರುವ ಇರಾನ್ ಬೆಂಬಲಿತ ಪಡೆಗಳ ಮೇಲೆ ಮಂಗಳವಾರ ವಾಯುದಾಳಿ ನಡೆಸಿರುವುದಾಗಿ ಅಮೆರಿಕ ಬುಧವಾರ ಘೋಷಿಸಿದೆ.
ಇರಾನ್ ನ ರೆವೊಲ್ಯುಷನರಿ ಗಾರ್ಡ್ಸ್ ಕಾರ್ಪ್ಸ್(ಐಆರ್ಜಿಸಿ)ನೊಂದಿಗೆ ಸಂಯೋಜನೆಗೊAಡಿರುವ ಸಂಘಟನೆಗಳು ಬಳಸುತ್ತಿದ್ದ ವ್ಯವಸ್ಥೆಯನ್ನು ಗುರಿಯಾಗಿಸಿ ದಾಳಿ ನಡೆದಿದೆ. ಇರಾನ್ ಬೆಂಬಲಿತ ಸಂಘಟನೆಗಳ ದಾಳಿಯಿಂದ ಅಮೆರಿಕದ ಪಡೆಗಳನ್ನು ರಕ್ಷಿಸುವ ಉದ್ದೇಶದ ಕಾರ್ಯಾಚರಣೆ ಇದಾಗಿದೆ ಎಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ಹೇಳಿದೆ.
ಈ ದಾಳಿಗೆ ಅಧ್ಯಕ್ಷರು ನಿರ್ದೇಶನ ನೀಡಿದ್ದರು. ಉಲ್ಬಣಗೊಳ್ಳುವಿಕೆಯ ಅಪಾಯವನ್ನು ಮಿತಿಗೊಳಿಸುವ ಮತ್ತು ಸಾವುನೋವುಗಳ ಅಪಾಯವನ್ನು ಕನಿಷ್ಟಗೊಳಿಸುವ ಪ್ರಮಾಣಬದ್ಧ, ಉದ್ದೇಶಪೂರ್ವಕ ಕಾರ್ಯಾಚರಣೆ ಇದಾಗಿದೆ ಎಂದು ಸೆಂಟ್ರಲ್ ಕಮಾಂಡ್ನ ವಕ್ತಾರ ಕರ್ನಲ್ ಜೋ ಬುಕಿನೋ ಹೇಳಿದ್ದಾರೆ. ಸಿರಿಯಾದಲ್ಲಿ ಕುರ್ಡಿಶ್ ನೇತೃತ್ವದ ಸಿರಿಯನ್ ಡೆಮೊಕ್ರಟಿಕ್ ಪಡೆಗೆ ನೆರವಾಗಲು ಅಮೆರಿಕ ಸುಮಾರು ೯೦೦ ಯೋಧರನ್ನು ರವಾನಿಸಿದೆ .