ಮೂಡುಬಿದಿರೆ ತಾಲೂಕು ದಸಂಸ (ಅಂಬೇಡ್ಕರ್ ವಾದ) ಸಮಿತಿ ಪುನರ್ ರಚನೆ
ಮಂಗಳೂರು, ಆ.25: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೂಡುಬಿದಿರೆ ತಾಲೂಕು ಸಮಿತಿಯ ಪುನರ್ರಚನಾ ಸಭೆಯು ಇತ್ತೀಚೆಗೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಿತು.
ದಸಂಸ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್. ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬಿ.ಕೆ. ವಸಂತ್ ಅವರು ಅಂಬೇಡ್ಕರ್‌ರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಗೌರವಿಸಿದರು. ದ.ಕ. ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ದಸಂಸದ ಮಾಜಿ ಜಿಲ್ಲಾ ಪ್ರಧಾನ ಸಂಚಾಲಕ ಹೂವಪ್ಪಮಾಸ್ಟರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಎಸ್.ಎಸ್ ಪಡುಮಾರ್ನಾಡು, ನಾಗೇಶ್ ಮುಲ್ಲಕಾಡು, ಜಿಲ್ಲಾ ನಿರ್ವಾಹಕ ಸದಸ್ಯರಾದ ವೆಂಕಣ್ಣ ಕೊಯ್ಯೂರು, ಮೂಡಬಿದಿರೆ ತಾಲೂಕು ಸಂಚಾಲಕ ಹೊನ್ನಯ್ಯ ತೋಡಾರು, ಮಂಗಳೂರು ತಾಲೂಕು ಸಂಚಾಲಕ ಕೆ.ಚಂದ್ರ ಕಡಂದಲೆ, ಮೂಡುಬಿದಿರೆ ಪುರಸಭಾ ಸದಸ್ಯರಾದ ಕೊರಗಪ್ಪ, ಕಾರ್ಕಳ ತಾಲೂಕು ಮಾಜಿ ಪ್ರಧಾನ ಸಂಚಾಲಕ ರಮೇಶ್, ಮೂಡುಬಿದಿರೆ ತಾಲೂಕು ಸಂಘಟನಾ ಸಂಚಾಲಕ ಶಶಿಕಾಂತ್ ಬಂಗಾಲಪದವು ಉಪಸ್ಥಿತರಿದ್ದರು.
ಮೂಡುಬಿದಿರೆ ತಾಲೂಕು ಪ್ರಧಾನ ಸಂಚಾಲಕರಾಗಿ ಕೊರಗಪ್ಪ, ಸಂಘಟನಾ ಸಂಚಾಲಕರಾಗಿ ಶಶಿಕಾಂತ್ ಬಂಗಾಲಪದವು, ಅಜೇಯ್ ಗಾಂಧಿನಗರ, ಹರೀಶ್ ಕಲ್ಲಬೆಟ್ಟು, ವಿನೂತ ಕಲ್ಲಬೆಟ್ಟು, ಖಜಾಂಚಿಯಾಗಿ ಶಿಲ್ಪಾಕಲ್ಲಬೆಟ್ಟು, ನಿರ್ವಾಹಕ ಸಮಿತಿ ಸದಸ್ಯರಾಗಿ ಹೊನ್ನಯ್ಯ ತೋಡಾರು, ಬಾಬು ಅಳಿಯೂರು, ಶಿವಕುಮಾರ್ ಕಲ್ಲಬೆಟ್ಟು, ಭುವನೇಶ್ ಗಾಂಧಿನಗರ, ಹರೀಶ್ ಒಂಟಿಕಟ್ಟೆ ಅವರನ್ನು ಆಯ್ಕೆ ಮಾಡಲಾಯಿತು.