ಚೀನಾ: ಅಮೆರಿಕ ಪ್ರಜೆಯ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

Update: 2022-08-25 17:20 GMT

ಬೀಜಿಂಗ್, ಆ.25: ತನ್ನ ಮಾಜಿ ಗೆಳತಿಯ `ಉದ್ದೇಶಪೂರ್ವಕ ನರಹತ್ಯೆಗಾಗಿ' ಅಮೆರಿಕದ ಪ್ರಜೆಗೆ  ಮರಣದಂಡನೆ ಶಿಕ್ಷೆ ವಿಧಿಸಿದ್ದ ಕೆಳನ್ಯಾಯಾಲಯದ ತೀರ್ಪನ್ನು ಝೆಜಿಯಾಂಗ್ ಪ್ರಾಂತದ ಹೈಪೀಪಲ್ಸ್ ಕೋರ್ಟ್ ಗುರುವಾರ ಎತ್ತಿಹಿಡಿದಿದೆ ಎಂದು ವರದಿಯಾಗಿದೆ.

ಅಮೆರಿಕದ ಪ್ರಜೆ ಶದೀದ್ ಅಬ್ದುಲ್‌ ಮತೀನ್ ಎಂಬಾತ 2019 ರಲ್ಲಿ ಚೆನ್ ಎಂಬ ಉಪನಾಮದ ತನ್ನ ಮಾಜಿ ಗೆಳತಿಯನ್ನು ಮಾತನಾಡುವ ನೆಪದಲ್ಲಿ ನಿಂಗ್ಬೊ ನಗರದ ಬಸ್ಸುನಿಲ್ದಾಣಕ್ಕೆ ಕರೆಸಿಕೊಂಡು, ಮಾತಿನ ಚಕಮಕಿಯ ಬಳಿಕ ಆಕೆಯನ್ನು ಹತ್ಯೆ ಮಾಡಿದ್ದ ಎಂಬ ಆರೋಪ ಸಾಬೀತಾಗಿರುವುದಾಗಿ ಎಪ್ರಿಲ್ನಲ್ಲಿ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ಅಬ್ದುಲ್ ಮತೀನ್ ಉಚ್ಛನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದ. ಆದರೆ ಮನವಿಯನ್ನು ತಿರಸ್ಕರಿಸಿರುವ ಉಚ್ಛನ್ಯಾಯಾಲಯ, ಕೆಳನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ ಎಂದು ಸಿಸಿಟಿವಿ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News