×
Ad

ಸಿಧು ಮೂಸೆವಾಲ ಹಾಡಿಗೆ ಕುಣಿದ ಭಾರತ-ಪಾಕ್‌ ಸೈನಿಕರು: ವಿಡಿಯೋ ವೈರಲ್‌

Update: 2022-08-26 23:25 IST
Photo: Twitter

ಹೊಸದಿಲ್ಲಿ: ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸ್ ಅವರಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಪಾಕಿಸ್ತಾನದ ಸೇನೆಯಲ್ಲೂ ಸಿಧು ಗೀತೆಗೆ ಕುಣಿಯುವವರಿದ್ದಾರೆ. ಸಿಧು ಹಾಡಿಗೆ ಗಡಿಯ ಉಭಯ ಭಾಗದಲ್ಲಿ ಭಾರತ-ಪಾಕ್‌ ಸೈನಿಕರು ಕುಣಿಯುವ ವಿಡಿಯೋ ವೈರಲ್‌ ಆಗಿದೆ. 

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಎಚ್‌ಜಿಎಸ್ ಧಲಿವಾಲ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪಾಕಿಸ್ತಾನಿ ಸೈನಿಕರು ಮೂಸ್ ವಾಲಾ ಅವರ ಬಂಬಿಹಾ ಬೋಲೆ ಹಾಡನ್ನು ಇಟ್ಟು ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಭಾರತೀಯ ಸೇನೆಯ ಸಿಬ್ಬಂದಿ ಪೆಪ್ಪಿ ಹಾಡಿಗೆ ನೃತ್ಯ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಗಡಿಯ ಹೊರಠಾಣೆಯಲ್ಲಿ ವಿಡಿಯೋ ರೆಕಾರ್ಡ್ ಮಾಡಲಾಗಿದೆಯೆಂದು ವರದಿಯಾಗಿದೆ.

"ಸಿಧುವಿನ ಹಾಡುಗಳು ಗಡಿಯುದ್ದಕ್ಕೂ ಪ್ಲೇ ಆಗುತ್ತಿವೆ! ವಿಭಜನೆಯನ್ನು ಬೆಸೆಯುತ್ತಿದೆ" ಎಂದು ಪೋಸ್ಟ್ ಅನ್ನು ಹಂಚಿಕೊಳ್ಳುವಾಗ HGS ಧಲಿವಾಲ್ ಬರೆದಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋ ವೀಕ್ಷಿಸಿದ ನಂತರ ಹಲವಾರು ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News