ತಮಿಳುನಾಡಿನಲ್ಲಿ ರಸ್ತೆ ಅಪಘಾತ; ಬಿ.ಸಿ.ರೋಡ್‌ನ ಯುವಕ ಮೃತ್ಯು
Update: 2022-08-27 10:04 IST
ಬಂಟ್ವಾಳ: ತಮಿಳುನಾಡಿನ ಅಂಬೂರ್ ಎಂಬಲ್ಲಿ ಶುಕ್ರವಾರ ತಡ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಬಿ.ಸಿ.ರೋಡ್ ತಲಪಾಡಿ ನಿವಾಸಿಯೊಬ್ಬರು ಮೃತಪಟ್ಟಿದ್ದಾರೆ.
ತಲಪಾಡಿ ನಿವಾಸಿ ಇರ್ಷಾದ್ (37) ಮೃತಪಟ್ಟವರು ಎಂದು ತಿಳಿದುಬಂದಿದೆ.
ಮಂಗಳೂರು ದಕ್ಕೆಯಿಂದ ಚೆನ್ನೈಗೆ ಲಾರಿಯಲ್ಲಿ ಮೀನು ಸಾಗಾಟದ ಮಾಡುತ್ತಿದ್ದ ಇರ್ಷಾದ್ ಚಲಾಯಿಸುತ್ತಿದ್ದ ಲಾರಿ ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇರ್ಷಾದ್ ಅವರ ತಂದೆ ಇತ್ತೀಚಿಗೆ ನಿಧನರಾಗಿದ್ದು, ಮೃತ ಇರ್ಷಾದ್ ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.