×
Ad

ಮಂಗಳೂರು; 36 ಗಂಟೆಗಳ ರಾಷ್ಟ್ರೀಯ ಸ್ಮಾರ್ಟ್ ಇಂಡಿಯಾ ಸಾಫ್ಟ್‌ವೇರ್ ಹ್ಯಾಕಥಾನ್ ಸಮಾರೋಪ

Update: 2022-08-27 11:55 IST

ಮಂಗಳೂರು, ಆ.27: ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜ್ ನಲ್ಲಿ ಆ.25, 26 ರವರೆಗೆ ಎರಡು ದಿನಗಳ ಕಾಲ ನಡೆದ 36 ಗಂಟೆಗಳ ರಾಷ್ಟ್ರೀಯ ಸ್ಮಾರ್ಟ್ ಇಂಡಿಯಾ ಸಾಫ್ಟ್‌ವೇರ್ ಹ್ಯಾಕಥಾನ್ 2022 ಸಮಾರೋಪ  ಗೊಂಡಿದೆ.

ಸಮಾರೋಪ ಸಮಾರಂಭದಲ್ಲಿ ಮಂಗಳೂರು  ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀಜಿತಕಾಮಾನಂದಜಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸ್ವಾಮಿ ವಿವೇಕಾನಂದರ ವಚನಗಳನ್ನು ಉಲ್ಲೇಖಿಸಿ, "ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಸಮಸ್ಯೆಯನ್ನು ಪರಿಹರಿಸಬೇಕು" ಭಾರತಕ್ಕೆ ಉದ್ಯೋಗಾಕಾಂಕ್ಷಿಗಳಿಗಿಂತ ಹೆಚ್ಚಾಗಿ ಉದ್ಯೋಗ ಸೃಷ್ಟಿಸುವ  ಉದ್ಯಮಿಗಳ  ಅಗತ್ಯವಿದೆ ಎಂದರು. ಸಹ್ಯಾದ್ರಿ ಕಾಲೇಜು ಜ್ಞಾನ ಆಧಾರಿತ ಕೋರ್ಸ್‌ಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಅನುಭವವನ್ನು ನೀಡುತ್ತದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ವಾಕಥಾನ್ ನಲ್ಲಿ  6 ತಂಡಗಳು  ಬಹುಮಾನವನ್ನುಗಳಿಸಿವೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022 ಸಾಫ್ಟ್‌ವೇರ್ ಆವೃತ್ತಿಯನ್ನು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಆತಿಥ್ಯ ದಲ್ಲಿ ಎರಡು ದಿನಗಳ ಕಾಲ ನಡೆಯಿತು.

183 ವಿದ್ಯಾರ್ಥಿಗಳು  11 ರಾಜ್ಯ ಗಳಿಂದ ಭಾಗವಹಿಸಿದ್ದರು. 24 ತಂಡವು ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ 9 ಸಮಸ್ಯೆ ಗಳ ನ್ನು ಪರಿಹರಿಸುವ ಯೋಜನೆಗಳ ಮಾದರಿಗಳನ್ನು ತಯಾರಿಸಿಸುವ  ಭಾರತದ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022 ಅನ್ನು ಶಿಕ್ಷಣ ಸಚಿವಾಲಯದ ಇನ್ನೋವೇಶನ್ ಸೆಲ್ ಮತ್ತು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ನವದೆಹಲಿಯ ಮೂಲಕ ಆಯೋಜಿಸಿಸಲಾಗಿತ್ತು.

ಭಂಡಾರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಶಾಸಕ ಮಂಜುನಾಥ ಭಂಡಾರಿ, ಎಸ್‌ಸಿಇಎಂ ಕೆನರಾ ಬ್ಯಾಂಕ್ ಎಜಿಎಂ ರಾಬರ್ಟ್ ಡಿಸಿಲ್ವ, ನೋಡಲ್ ಸೆಂಟರ್ ನಿರ್ದೇಶಕ ಮತ್ತು ಎಐಸಿಟಿಇ ನಾಮನಿರ್ದೇಶಿತರಾದ ಡಾ.ಅಂಕಿತ್ ಕಿಶೋರ್ ರಾಠೆ, ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರತಿನಿಧಿ ರಾಜೀವ್ ಕುಮಾರ್, ಆರ್ & ಡಿ ನಿರ್ದೇಶಕ ಮಂಜಪ್ಪ,  ಪ್ರಾಂಶುಪಾಲ ಡಾ.ರಾಜೇಶ್, ಸಂಯೋಜಕರಾದ  ಡಾ. ಪ್ರಿಯಾ ಕಾಮತ್ ವೇದಿಕೆಯಲ್ಲಿ  ಉಪಸ್ಥಿತರಿದ್ದರು.

ಅತ್ಯುತ್ತಮ  5 ತಂಡಗಳಿಗೆ ತಲಾ ರೂ. 1 ಲಕ್ಷ ನಗದು ಪ್ರಶಸ್ತಿ ಬಹುಮಾನವನ್ನು ವಿತರಿಸಲಾಯಿತು.

● ಮಹಾರಾಷ್ಟ್ರದ ಪುಣೆ ಇನ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಟೆಕ್ನಾಲಜಿಯ "ಬ್ರೈನ್‌ಹ್ಯಾಕ್ಸ್ 19" ತಂಡವು ಮುಖ ಗುರುತಿಸುವಿಕೆ ಕಾರ್ಯವಿಧಾನವನ್ನು ಬಳಸಿಕೊಂಡು ಗುಂಪು ಫೋಟೋದಿಂದ ವ್ಯಕ್ತಿಗಳನ್ನು ಪತ್ತೆಹಚ್ಚಲು, ಪ್ರತ್ಯೇಕಿಸಲು ಮತ್ತು ಹೊಂದಿಸಲು ಸಾಧನವನ್ನು ಅಭಿವೃದ್ಧಿಪಡಿಸುವ ಮಾದರಿ ತಯಾರಿಸಿದೆ.

● ತಮಿಳುನಾಡಿನ ಆರ್ ಎಂಕೆ ಇಂಜಿನಿಯರಿಂಗ್ ಕಾಲೇಜಿನ "ಕಲಾಂ ಫೈರ್‌ಬರ್ಡ್" ತಂಡವು ಕಳೆದುಹೋದ ಎಲ್ ಎಸ್ ಬಿ ಗಳನ್ನು ಗುರುತಿಸುವ ಮಾದರಿ ತಯಾರಿಸಿ ದೆ. ಇದನ್ನು ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ರಸ್ತೆ ಜಾಲಕ್ಕೆ ಸೇರಿಸಬಹುದು.

● ತಮಿಳುನಾಡಿನ ಪನಿಮಲಾರ್ ಇಂಜಿನಿಯರಿಂಗ್ ಕಾಲೇಜಿನ "ಟೀಮ್ ಎಮರ್ಜಿಂಗ್" ಪ್ರೋಗ್ರಾಮರ್‌ಗಳು, ಚಿತ್ರ ಸೆರೆಹಿಡಿಯುವಿಕೆ, ಸಂಸ್ಕರಣೆ, ಪ್ರಮಾಣೀಕರಣ, ಮೌಲ್ಯಮಾಪನ ಮತ್ತು ವರ್ಗೀಕರಣಕ್ಕಾಗಿ ಯಾಂತ್ರಿಕತೆಯ ಆಟೋಮೇಷನ್‌ನಲ್ಲಿ ಮಾದರಿ ರೂಪಿಸಿದ್ದಾರೆ. 

●ವೆಂಕಟೇಶ್ವರ ಕಾಲೇಜ್ ಆಫ್ ಟೆಕ್ನಾಲಜಿ, ಶ್ರೀಪೆರ್ಂಬದೂರ್,  ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಯೋಜನೆಯ ಮಾದರಿ ರೂಪಿಸಿದೆ.

● ತಮಿಳುನಾಡಿನ ಕೆಪಿಆರ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ರಿಸರ್ಚ್‌  ತಂಡವು ಗ್ರೇಡಿಂಗ್ ವ್ಯತ್ಯಾಸದ ಕುರಿತು ವಿವರವಾದ ವರದಿಗಳನ್ನು ಒದಗಿಸಲು  ಉಪಕರಣದ ಮಾದರಿ ರೂಪಿಸಿದೆ.

ಸಹ್ಯಾದ್ರಿ ಕಾಲೇಜ್ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ  ಮಂಜುನಾಥ ಭಂಡಾರಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಉತ್ತಮ ಆಲೋಚನೆಗಳನ್ನು ಮೆದುಳಿನಲ್ಲಿ ಬಿತ್ತಲು, ಅವರ ಆಲೋಚನೆಗಳನ್ನು ಪೋಷಿಸಲು ಮತ್ತು ಕೆಲವು ವರ್ಷಗಳ ನಂತರ ಅದು ರೂಪುಗೊಂಡು ಫಲ ನೀಡಲು ಈ ಕಾರ್ಯಕ್ರಮ ಸಹಕಾರಿ, "ಯುವಕರು ಶಿಕ್ಷಣ ಪಡೆದಾಗ, ಸಮುದಾಯಗಳು ಪ್ರಬುದ್ಧವಾಗುತ್ತವೆ, ಮತ್ತು ಸಮುದಾಯಗಳು ಪ್ರಬುದ್ಧವಾದಾಗ, ರಾಷ್ಟ್ರವು ಸಬಲಗೊಳ್ಳುತ್ತದೆ" ಎಂದು ಅವರು ತಿಳಿಸಿದ್ದಾರೆ.

ಡಾ. ಮಂಜಪ್ಪ ಎಸ್ ಸ್ವಾಗತಿಸಿದರು,  ಪ್ರಾಂಶುಪಾಲರಾದ ಡಾ. ರಾಜೇಶ ಎಸ್ ಕಾರ್ಯಕ್ರಮಗಳ ವರದಿ ನೀಡಿದರು. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ - ಸಹ್ಯಾದ್ರಿ ಸಂಯೋಜಕಿ ಡಾ. ಪ್ರಿಯಾ ಆರ್ ಕಾಮತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News