×
Ad

ವಕ್ಫ್ ನೂತನ ಜಿಲ್ಲಾಧ್ಯಕ್ಷ, ಸದಸ್ಯರಿಗೆ ಕಾಜೂರಿನಲ್ಲಿ ಅಭಿನಂದನೆ

Update: 2022-08-27 19:14 IST

ಬೆಳ್ತಂಗಡಿ: ಕರ್ನಾಟಕ ವಕ್ಫ್ ಮಂಡಳಿಯ ದ.ಕ‌‌ ಜಿಲ್ಲಾ ಸಲಹಾ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿ ರುವ ಖ್ಯಾತ ಉದ್ಯಮಿ ಬಿ.ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಅಬ್ದುಲ್ ರಹಿಮಾನ್ ಮೊಗರ್ಪಣೆ, ಕಾಜೂರ್ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ  ಜಿಲ್ಲಾ ವಕ್ಫ್  ಸದಸ್ಯರು ಆದ ಜೆ.ಎಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು ಅವರಿಗೆ ಕಾಜೂರು ಆಡಳಿತ ಮಂಡಳಿ ವತಿಯಿಂದ  ಅಭಿನಂದನಾ ಕಾರ್ಯಕ್ರಮ ನಡೆಯಿತು‌.

ಕಾಜೂರು ಪ್ರಧಾನ ಧರ್ಮಗುರುಗಳಾದ ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಅವರ ಧಾರ್ಮಿಕ ನೇತೃತ್ವದಲ್ಲಿ ನಡೆದ ಮಾಸಿಕ ದಿಕ್ರ್ ಸ್ವಲಾತ್ ವಿಶೇಷ ಕಾರ್ಯಕ್ರಮದಲ್ಲಿ ಈ ಸನ್ಮಾನ ನಡೆಯಿತು.

ಸಂಸ್ಥೆಯ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು ಅಭಿನಂದನಾ ಮಾತುಗಳನ್ನಾಡಿದರು.‌ ಸನ್ಮಾನ ಸ್ವೀಕರಿಸಿ ಮಾತನಾಡಿದ ವಕ್ಫ್ ಜಿಲ್ಲಾಧ್ಯಕ್ಷ ಅಬ್ದುಲ್ ನಾಸಿರ್ ಅವರು, ಕಾಜೂರು ಇಂದು ಅಭಿವೃದ್ಧಿಯಲ್ಲಿ ಮಾದರಿಯಾಗಿದೆ. ಮುಂದಕ್ಕೆ ಇನ್ನಷ್ಟು ಅಭಿವೃದ್ಧಿಗೆ ವಕ್ಫ್ ಮಂಡಳಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಮುದರ್ರಿಸ್ ಇರ್ಫಾನ್ ಸಖಾಫಿ, ಕೋಶಾಧಿಕಾರಿ ಕೆ.ಎಮ್ ಕಮಾಲ್, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಸಮಿತಿಯ ನಿರ್ದೇಶಕರುಗಳು, ಎಸ್‌ವೈಎಸ್ ಕಾಜೂರು ಬ್ರಾಂಚ್ ಅಧ್ಯಕ್ಷ ಕೆ.ಎಮ್ ಅಬೂಬಕ್ಕರ್ ಕುಕ್ಕಾವು, ಮೆನೇಜರ್ ಶಮೀಮ್ ಮೊಯ್ದಿನ್ ಮೊದಲಾದವರು ಉಪಸ್ಥಿತರಿದ್ದರು.

ಈ ವೇಳೆ ಕಾಜೂರು ಶರೀಅತ್ ಕಾಲೇಜಿನ ವಿದ್ಯಾರ್ಥಿಗಳು ರಚಿಸುವ ಮಾಸಿಕ ಕೈ ಬರಹದ ಬುಲೆಟಿನ್ ಬಿಡುಗಡೆಗೊಳಿಸಲಾಯಿತು.

ಸದರ್ ಉಸ್ತಾದ್ ರಶೀದ್ ಮದನಿ ಕಾರ್ಯಕ್ರಮ ನಿರೂಪಿಸಿದರು. ‌ಊರ ಪರವೂರ ಮಂದಿ ಸ್ವಲಾತ್ ಮತ್ತು ದುಆ ಸಂಗಮದಲ್ಲಿ ಭಾಗಿಯಾಗಿದ್ದರು‌‌.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News