×
Ad

ಉಡುಪಿ; ಸರ್ಕಲ್‌ಗೆ ಹಾಜಿ ಅಬ್ದುಲ್ಲ ನಾಮಕರಣ ಮಾಡುವಂತೆ ಒತ್ತಾಯ

Update: 2022-08-27 19:59 IST
ಸಾಂದರ್ಭಿಕ ಚಿತ್ರ

ಉಡುಪಿ: ನಗರದ ತಾಲೂಕು ಕಚೇರಿ ವೃತ್ತಕ್ಕೆ ಉಡುಪಿಯ ಎಲ್ಲಾ ಜನತೆ ಒಪ್ಪುವ ಉಡುಪಿಯ ದಾನಶೂರ ಲಾಲ್ ಬಹದ್ದೂರ್ ಹಾಜಿ ಅಬ್ದುಲ್ಲಾ ಅವರ ಹೆಸರು ನಾಮಕರಣ ಮಾಡುವಂತೆ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್‌ನ ಉಡುಪಿ ಜಿಲ್ಲಾಧ್ಯಕ್ಷ ಹುಸೇನ್ ಕೋಡಿ ಬೇಂಗ್ರೆ ಒತ್ತಾಯಿಸಿದ್ದಾರೆ.

ಉಡುಪಿಯ ಇತಿಹಾಸದ ಪುಟಗಳಲ್ಲಿ ದಾನ, ಸಹಾಯ, ಸೌಹಾರ್ದ ಹಾಗೂ ಜನಸ್ನೇಹಕ್ಕೆ ಜನರ ಬದುಕು ರೂಪಿಸಿದ ವ್ಯಕ್ತಿತ್ವ ಹಾಜಿ ಅಬ್ದುಲ್ಲಾ ಅವರದ್ದು. ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಧರ್ಮಗಳ ಮಧ್ಯೆ ಸೌಹಾರ್ದ ಕ್ಕಾಗಿ ಹಾಜಿ ಅಬ್ದುಲ್ಲಾ ಮಾಡಿದ ಕೆಲಸ ಯಾರು ಕೂಡ ಕನಸು ಮನಸಲ್ಲೂ ತಿಳಿಯದು. ಹಾಗಾಗಿ ಜನತೆಯ ಮನಸ್ಸಲ್ಲಿ ಮನೆ ಮಾಡಿರುವ ಹಾಜಿ ಅಬ್ದುಲ್ಲಾ ಅವರ ಹೆಸರು ತಾಲೂಕು ಕಚೇರಿ ವೃತ್ತಕ್ಕೆ ಇಡಬೇಕು. ಇದರಲ್ಲಿ ಯಾರಿಗೂ ಭಿನ್ನಾಭಿ ಪ್ರಾಯ ಇಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News