×
Ad

ಪಾದಚಾರಿ ರಸ್ತೆಯಲ್ಲಿ ನಡೆದಾಡಲು ಅಡ್ಡಿ: ಆರೋಪ

Update: 2022-08-27 20:01 IST

ಉಡುಪಿ : ಗೌರಿ ಗಣೇಶ ಹಬ್ಬಕ್ಕೆ ಕೆಲವು ದಿನಗಳು ಇನ್ನೂ ಬಾಕಿ ಇರುವಾಗಲೇ, ಕವಿ ಮುದ್ದಣ ಮಾರ್ಗದ ತ್ರಿವೇಣಿ ಸರ್ಕಲ್ ಬಳಿಯ ಪಾದಾ ಚಾರಿ ರಸ್ತೆಯಲ್ಲಿ ಟಾರ್ಪಲು ಹೊದಿಸಿ, ಪಾದೆಕಲ್ಲು ಹಾಕಿ ತಮ್ಮ ಮಾರಾಟದ ಸ್ಥಳಗಳನ್ನು ಹೂವಿನ ವ್ಯಾಪಾರಿಗಳು ಕಾಯ್ದಿರಿಸಿಕೊಂಡಿದ್ದಾರೆ.

ಇದರಿಂದ ಸಾರ್ವಜನಿಕರು, ಹಿರಿಯ ನಾಗರಿಕರು, ಶಾಲಾ ವಿದ್ಯಾರ್ಥಿಗಳು, ದಿವ್ಯಾಂಗರು, ನಡೆದಾಡಲು ಸುರಕ್ಷಿತ ಪಾದಚಾರಿ ರಸ್ತೆ ಬಿಟ್ಟು ವಾಹನ ದಟ್ಟಣೆಯ ನಡುರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆ ಸ್ಥಳ ಇದ್ದು, ಜನ ನಡೆದಾಡಲು ಸಮಸ್ಯೆ ಎದುರಾಗಿದೆ. ನಗರಸಭೆ ತಕ್ಷಣ ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News