ಶ್ರೀಲಂಕಾದಲ್ಲಿ ಮಕ್ಕಳು ಉಪವಾಸ ಮಲಗುವ ಸ್ಥಿತಿ ಬಂದಿದೆ: ವಿಶ್ವಸಂಸ್ಥೆ

Update: 2022-08-27 16:25 GMT

ಕೊಲೋಂಬೋ, ಆ.27: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಆ ದೇಶದ ಮಕ್ಕಳು ಉಪವಾಸ ಮಲಗುವ ಸ್ಥಿತಿ ಬಂದಿದೆ. ದಕ್ಷಿಣ ಏಶ್ಯಾದ ಇತರ ದೇಶಗಳಲ್ಲೂ ಇದೇ ರೀತಿಯ ಆಹಾರದ ಕೊರತೆ ಎದುರಾಗಬಹುದು ಎಂದು ವಿಶ್ವಸಂಸ್ಥೆ ಶುಕ್ರವಾರ ಹೇಳಿದೆ.

ಶ್ರೀಲಂಕಾದಲ್ಲಿ ವಿದೇಶಿ ವಿನಿಮಯದ ದಾಸ್ತಾನು ಕನಿಷ್ಟ ಮಟ್ಟ ತಲುಪಿದ ಕಾರಣ ಆ ದೇಶಕ್ಕೆ ಆಮದು ಮಾಡಿಕೊಳ್ಳಲು ಸಮಸ್ಯೆಯಾಗಿದ್ದು ಆಹಾರ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ತೀವ್ರ ಕೊರತೆ ಎದುರಾಗಿದೆ. ಆದರೆ  ಬಡ ಮತ್ತು ದುರ್ಬಲ ವರ್ಗದ ಕುಟುಂಬಗಳಿಗೆ ಆಹಾರ ವಸ್ತುಗಳ ಬೆಲೆಯೇರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ವರ್ಗದವರು ಅತ್ಯಂತ ಹೆಚ್ಚು ಸಮಸ್ಯೆಗೆ ಸಿಲುಕಿದ್ದಾರೆ ಎಂದು ಯುನಿಸೆಫ್(ವಿಶ್ವಸಂಸ್ಥೆ ಮಕ್ಕಳ ಏಜೆನ್ಸಿ)ನ ದಕ್ಷಿಣ ಏಶ್ಯಾ ನಿರ್ದೇಶಕ ಜಾರ್ಜ್ ಲರ್ಯಾ-ಅಡ್ಜೆöÊ ಹೇಳಿದ್ದಾರೆ.

ಮುಂದಿನ ಊಟ ಯಾವಾಗ ದೊರಕುತ್ತದೆ ಎಂಬ ಖಚಿತತೆಯಿಲ್ಲದೆ ಮಕ್ಕಳು ಉಪವಾಸ ಮಲಗುವ ಪರಿಸ್ಥಿತಿಯಿದೆ . ಉಕ್ರೇನ್ ಮೇಲಿನ ರಶ್ಯದ ಆಕ್ರಮಣವು ನೆರೆಹೊರೆಯ ದೇಶಗಳ ಅರ್ಥವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ . ಇದು ದಕ್ಷಿಣ ಏಶ್ಯಾದ ಇತರ ದೇಶಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ದಕ್ಷಿಣ ಏಶ್ಯಾದ್ಯಂತ ತೀವ್ರ ಆರ್ಥಿಕ ಅನಿಶ್ಚಿತತೆ ಮತ್ತು ಹಣದುಬ್ಬರವು ಮಕ್ಕಳ ಜೀವನವನ್ನು ಮತ್ತಷ್ಟು ಅಪಾಯಕ್ಕೆ ತಳ್ಳಲು ಸಿದ್ಧವಾಗಿದೆ ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಶ್ರೀಲಂಕಾದ ಕನಿಷ್ಟ 50% ಮಕ್ಕಳ ತುರ್ತು ಅಗತ್ಯವನ್ನಾದರೂ ಪೂರೈಸಲು ೨೫ ಮಿಲಿಯನ್ ಡಾಲರ್ ಮೊತ್ತದ ಅಗತ್ಯವಿದ್ದು ದೇಣಿಗೆ ನೀಡುವಂತೆ ಯುನಿಸೆಫ್ ಅಂತಾರಾಷ್ವ್ರಿಯ ಸಮುದಾಯವನ್ನು ಕೋರಿದೆ. ಮಕ್ಕಳಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸಲು ನೆರವು ನೀಡುವಂತೆ ಸರಕಾರವೂ ಮನವಿ ಮಾಡಿಕೊಂಡಿದೆ. ಶ್ರೀಲಂಕಾದಲ್ಲಿ 5,70,000 ಶಾಲಾಪೂರ್ವ ವಿದ್ಯಾರ್ಥಿಗಳಲ್ಲಿ 1.27,000 ಮಕ್ಕಳು ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವುದಾಗಿ 2021ರಲ್ಲಿ ಸರಕಾರ ಅಂಕಿಅAಶ ಬಿಡುಗಡೆಗೊಳಿಸಿತ್ತು. ಆದರೆ ಆ ಬಳಿಕ ಆಹಾರ ವಸ್ತುಗಳ ಕೊರತೆ ತೀವ್ರಗೊಂಡಿದ್ದು ಹಣದುಬ್ಬರದ ಪ್ರಮಾಣ ಗಗನಕ್ಕೇರಿರುವುದರಿಂದ ಈ ಅಂಕಿಅAಶದಲ್ಲಿ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

51ಶತಕೋಟಿ ಡಾಲರ್ ವಿದೇಶಿ ಸಾಲ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಕಳೆದ ಎಪ್ರಿಲ್ನಲ್ಲಿ ಶ್ರೀಲಂಕಾವನ್ನು `ಡಿಫಾಲ್ಟರ್' ಪಟ್ಟಿಗೆ ಸೇರಿಸಲಾಗಿದೆ. ಪ್ರಸ್ತುತ, ಆರ್ಥಿಕ ನೆರವು ವಿಸ್ತರಿಸುವ ನಿಟ್ಟಿನಲ್ಲಿ ಆ ದೇಶವು ಐಎಂಎಫ್(ಅಂತಾರಾಷ್ವ್ರಿಯ ಹಣಕಾಸು ನಿಧಿ)ಯ ಜತೆ ಮಾತುಕತೆ ನಡೆಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News