ಮುಂದುವರೆದ ಕಾರ್ಯಾಚರಣೆ: ಮತ್ತೆ ಐವರು ಗಾಂಜಾ ವ್ಯಸನಿಗಳು ವಶಕ್ಕೆ
Update: 2022-08-27 22:09 IST
ಉಡುಪಿ: ಮಾದಕ ದ್ರವ್ಯದ ವಿರುದ್ಧ ಪೊಲೀಸ್ ಕಾರ್ಯಾಚರಣೆ ಮುಂದುವರೆದಿದ್ದು, ಗಾಂಜಾ ಸೇವಿಸುತ್ತಿದ್ದ ಮತ್ತೆ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆ.24ರಂದು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತ ನಗರ ಉಡುಪಿ ಗ್ರೂಪ್ ಆಫ್ ಇನ್ಟಿಟ್ಯೂಶನ್ ಬಳಿ ಕೇರಳ ಮೂಲದ ಮುಹಮ್ಮದ್ ಶಾಕಿರ್ ಸಿ.(22), ಪೆರಂಪಳ್ಳಿ ಶೀಂಬ್ರ ಸೇತುವೆ ಬಳಿ ಕೇರಳದ ಕಣ್ಣೂರು ಅಶ್ವಲ (20), ಹೆರ್ಗಾ ಗ್ರಾಮದ ಈಶ್ವರ ನಗರ ಎಂಬಲ್ಲಿ ಮಹಾರಾಷ್ಟ್ರದ ದರ್ಶ್ ಕುಮಾರ್ ಜಾವುರ್(18) ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ.
ಉಡುಪಿ ಸೆನ್ ಪೊಲೀಸರು ಆ.೨೭ರಂದು ಉಡುಪಿಯ ಕುಕ್ಕಿಕಟ್ಟೆ ಬಳಿ ಸಾಧಿಕ್ ಹಾಗೂ ದುಗ್ಗಿಪದವು ಮಂಚಿಕೆರೆ ಬಳಿ ಜಗದೀಶ್(೩೪) ಎಂಬವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರೆಲ್ಲ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.