×
Ad

ಸೋನಾಲಿ ಫೋಗಟ್ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹ

Update: 2022-08-27 22:49 IST

ಪಣಜಿ, ಆ.27: ಹರ್ಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಕೊಲೆ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ. ಈ ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರು ಯತ್ನಿಸುತ್ತಿದ್ದಾರೆಂದು ಅದು ಆಪಾದಿಸಿದೆ.

ಈ ಬಗ್ಗೆ ಗೋವಾ ವಿಧಾನಸಭೆಯ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಮೈಕೆಲ್ ಲೋಬೋ ಶನಿವಾರ ಹೇಳಿಕೆಯೊಂದನ್ನು ನೀಡಿ, ‘‘ ಹೃದಯಾಘಾತದಿಂದಾಗಿ ಸೋನಾಲಿ ಫೋಗಟ್ ಸಾವನ್ನಪ್ಪಿದ್ದಾರೆಂದು ಹಲವು ರಾಜಕಾರಣಿಗಳು ಹೇಳಿದ್ದರು. ಅಂತಿಮವಾಗಿ ಅದು ಕೊಲೆಯೆಂದು ಬಯಲಾಗಿದೆ.ಆದರೆ ಸತ್ಯವನ್ನು ಅನಾವರಣಗೊಳಿಸಲು ಪ್ರತಿಯೊಂದು ಕೋನದಿಂದಲೂ ಈ ಪ್ರಕರಣದ ತನಿಖೆ ನಡೆಯಬೇಕಾಗಿದೆೆ ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News