×
Ad

ಆ.31ರಿಂದ ಸೆ.4ರ ವರೆಗೆ 19ನೇ ವರ್ಷದ ಬಂಟ್ವಾಳ ಸಾರ್ವಜನಿಕ ಶ್ರೀ ಗಣೇಶೋತ್ಸವ: ರಮಾನಾಥ ರೈ

Update: 2022-08-28 20:27 IST

ಬಂಟ್ವಾಳ, ಆ.28: ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟುವಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವು ಈ ಬಾರಿ ಆ.31ರಿಂದ ಸೆ.4ರ ವರೆಗೆ 5 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ  ನಡೆಯಲಿದೆ ಎಂದು ಮಾಜಿ ಸಚಿವ, ಗಣೇಶೋತ್ಸವ ಆಚರಣಾ ಸಮಿತಿಯ ಗೌರವಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.

ಬಿ.ಸಿ.ರೋಡ್‌ನಲ್ಲಿ ರವಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಕ್ರಿಬೆಟ್ಟುವಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮಿಲನದೊಂದಿಗೆ ಸರ್ವ ಧರ್ಮದ ಭಗವದ್ಭಕ್ತರ ಸೇವಾ ಮನೋಭಾವದೊಂದಿಗೆ ಅರ್ಥಪೂರ್ಣವಾಗಿ ಮತ್ತು ವೈಭವಯುತವಾಗಿ ಆಚರಿಸಿಕೊಂಡು ಬರುತ್ತಿದ್ದು ಐದು ದಿನಗಳ ಸಂಭ್ರಮಾಚರಣೆಯ ಗಣೇಶೋತ್ಸವ ಜಿಲ್ಲೆ, ರಾಜ್ಯದ ಭಕ್ತಾಭಿಮಾನಿಗಳ ಮನಸೂರೆಗೊಂಡು 19ನೇ ವರ್ಷಕ್ಕೆ ಕಾಲಿರಿಸಿದೆ ಎಂದರು. 

ಜಕ್ರಿಬೆಟ್ಟು ಮ ಶ್ರೀ ಗಣೇಶೋತ್ಸವವು ಒಂದು ಜಾತಿ ಮತ ಧರ್ಮಕ್ಕೆ ಸೀಮಿತವಾಗದೆ ಎಲ್ಲರೂ ಒಂದಾಗಿ ಬೆಸೆಯುವ, ಬೆರೆಯುವ ಸೌಹಾರ್ಧತೆಯ ಸಮ್ಮೇಳನವಾಗಿ ರೂಪುಗೊಂಡು ಬಂಟ್ವಾಳದ ಹಬ್ಬವಾಗಿ ಆಚರಿಸಲ್ಪಡುತ್ತದೆ ಎಂದರು. 

ಶ್ರೀ ಗಣೇಶೋತ್ಸವದಲ್ಲಿ ಧಾರ್ಮಿಕ ಸಭೆಗಳಲ್ಲಿ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀಕ್ಷೇತ್ರ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಬಲ್ಯೊಟ್ಟು ಗುರುಕೃಪ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ, ಮೊಡಂಕಾಪು ಚರ್ಚ್ ಧರ್ಮಗುರುಗಳಾದ ರೆ| ಫಾ. ವಲೇರಿಯನ್ ಡಿಸೋಜ ಮೊದಲಾದ ಧಾರ್ಮಿಕ ನೇತಾರರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿರುವರು ಎಂದರು. 

ದಿನನಿತ್ಯ ಅನ್ನ ಸಂತರ್ಪಣೆ, ಮಹಿಳೆಯರಿಗೆ ವಿಶೇಷ ಕುಂಕುಮಾರ್ಚನೆ ಸೇವೆ, ಮಕ್ಕಳು, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ವಿಭಾಗದ ಸ್ಪರ್ಧೆಗಳು ನಡೆಯಲಿದೆ. ಪ್ರತಿದಿನ ಧಾರ್ಮಿಕ ಪ್ರವಚನಗಳು, ಭಜನೆ, ತುಳು ನಾಟಕಗಳ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಮೆರುಗು ನೀಡಲಿದೆ ಎಂದು ಹೇಳಿದರು. 

5ನೇ ದಿನ ಶ್ರೀ ಗಣೇಶ ಮೂರ್ತಿಯ ಶೋಭಾ ಯಾತ್ರೆಯು ವಿವಿಧ ಜಿಲ್ಲೆಗಳ ಕಲಾ ತಂಡಗಳು, ಸ್ತಬ್ದ ಚಿತ್ರಗಳೊಂದಿಗೆ ವೈಭವಯುತವಾಗಿ ನಡೆಯಲಿದೆ ಎಂದು ತಿಳಿಸಿದರು.

ಆಚರಣಾ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಪದಾಧಿಕಾರಿಗಳಾದ ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ರಾಜೀವ ಶೆಟ್ಟಿ ಎಡ್ತೂರ್, ಪದ್ಮನಾಭ ರೈ,ಸುದೀಪ್ ಕುಮಾರ್ ಶೆಟ್ಟಿ, ಮಹಾಬಲ ಬಂಗೇರ, ಜನಾರ್ದನ ಚಂಡ್ತಿಮಾರ್,  ಸುಭಾಶ್ಚಂದ್ರ ಶೆಟ್ಟಿ, ರಾಜೀವ ಕಕ್ಯಪದವು, ಸುಧಾಕರ ಶೆಣೈ, ಪ್ರವೀಣ್ ಬಿ., ಜಯಂತಿ, ಮಲ್ಲಿಕಾ ಶೆಟ್ಟಿ, ಲೋಲಾಕ್ಷ ಶೆಟ್ಟಿ, ಶಬೀರ್ ಸಿದ್ದಕಟ್ಟೆ, ಪದ್ಮನಾಭ ಸಾಮಂತ್ ಮತ್ತಿತರರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News