"ಜಗತ್ತಿನ ಅತಿ ದೊಡ್ಡ'' 5ಜಿ ಸೇವೆ ಮುಂದಿನೆರಡು ತಿಂಗಳಿನಲ್ಲಿ ಜಿಯೋ ಆರಂಭಿಸಲಿದೆ: ಮುಕೇಶ್ ಅಂಬಾನಿ

Update: 2022-08-29 12:28 GMT
Photo: Twitter/@ANI

ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(Reliance Industries Ltd) ಸಂಸ್ಥೆಯ ಭಾಗವಾಗಿರುವ ಜಿಯೋ(Reliance Jio) ಮುಂದಿನೆರಡು ತಿಂಗಳುಗೊಳಗಾಗಿ ಮೆಟ್ರೋ ನಗರಗಳಲ್ಲಿರುವ ತನ್ನ ಚಂದಾದಾರರಿಗೆ 'ಜಗತ್ತಿನ ಅತಿ ದೊಡ್ಡ' 5ಜಿ ಸೇವೆಗಳನ್ನು ಒದಗಿಸಲು ಆರಂಭಿಸಲಿದೆ ಎಂದು ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್‍ನ 45ನೇ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಮುಕೇಶ್ ಅಂಬಾನಿ(Mukesh Ambani) ಘೋಷಿಸಿದರು.

"ಜಿಯೋ 5ಜಿ ಜಗತ್ತಿನ ಅತ್ಯಂತ ದೊಡ್ಡ ಮತ್ತು ಆಧುನಿಕ 5ಜಿ ನೆಟ್‍ವರ್ಕ್ ಆಗಲಿದೆ. ಅದು 5ಜಿ ಇದರ ಲೇಟೆಸ್ಟ್ ಆವೃತ್ತಿಯಾದ "ಸ್ಟಾಂಡೆಲೋನ್ 5ಜಿ'' ಅನ್ನು ನಿಯೋಜಿಸಲಿದೆ ಹಾಗೂ ಇದು ಈಗಿನ 4ಜಿ ನೆಟ್‍ವರ್ಕ್ ಮೇಲೆ ಅವಲಂಬಿತವಾಗಿಲ್ಲ,'' ಎಂದು ಅಂಬಾನಿ ಹೇಳಿದರು.

ಜಿಯೋ 5ಜಿ ಸೇವೆಗಳು ಪ್ರತಿಯೊಬ್ಬರನ್ನೂ, ಪ್ರತಿ ಸ್ಥಳವೊಂದನ್ನೂ ಹಾಗೂ ಪ್ರತಿಯೊಂದನ್ನೂ ಸಂಪರ್ಕಪಡಿಸಲಿದೆ ಹಾಗೂ ಇದು ಅತ್ಯುನ್ನತ ಗುಣಮಟ್ಟ ಹೊಂದಿರಲಿದೆ. ಭಾರತದ ಡೇಟಾ-ಸಂಚಾಲಿತ ಆರ್ಥಿಕತೆಯನ್ನು ಚೀನಾ ಹಾಗೂ ಅಮೆರಿಕಾಗಿಂತಲೂ ಮುಂಚೂಣಿಗೆ ತರಲು ನಾವು ಬದ್ಧರಾಗಿದ್ದೇವೆ,'' ಎಂದು ಅಂಬಾನಿ ಹೇಳಿದರು.

ಇದನ್ನೂ ಓದಿ: ರಾಮನಗರದಲ್ಲಿ ಭಾರೀ ಮಳೆ: ಗ್ರಾಮಗಳು ಜಲಾವೃತ

ಈ 5ಜಿ ಸೇವೆಗಳನ್ನು ಒದಗಿಸಲು ಜಿಯೋ ಸಂಸ್ಥೆಯು ರೂ. 2 ಲಕ್ಷ ಕೋಟಿ ತೆಗೆದಿರಿಸಿದೆ ಮೊದಲು ಪ್ರಮುಖ ನಗರಗಳಲ್ಲಿ ಹಾಗೂ ನಂತರ ದೇಶಾದ್ಯಂತ ಒದಗಿಸಲಾಗುವುದು ಎಂದು ಅವರು ಹೇಳಿದರು.

ಕಳೆದ ತಿಂಗಳು ನಡೆದ ಭಾರತದ 19 ಬಿಲಿಯನ್ ಡಾಲರ್ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ 11 ಬಿಲಿಯನ್ ಡಾಲರ್ ಮೌಲ್ಯದ ತರಂಗಾಂತರಗಳನ್ನು ಜಿಯೋ ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News