×
Ad

ಪ್ರಿಯದರ್ಶಿನಿ ಸಹಕಾರ ಸಂಘದ ಪಡುಬಿದ್ರೆ ಶಾಖೆ ಉದ್ಘಾಟನೆ

Update: 2022-08-29 22:19 IST

ಪಡುಬಿದ್ರೆ, ಆ.29: ಹಳೆಯಂಗಡಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಾಗೂ ಒಂದೇ ವರ್ಷದ ಅವಧಿಯಲ್ಲಿ ಅತ್ಯಧಿಕ ಲಾಭಾಂಶ ಹೊಂದಿರುವ ದ.ಕ.‌ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ಪ್ರಿಯದರ್ಶಿನಿ ಸಹಕಾರ ಸಂಘದ ನೂತನ ಪಡುಬಿದ್ರೆ ಶಾಖೆಯ ಉದ್ಘಾಟನೆ ಸೋಮವಾರ ಶ್ರೀ‌ಮಹಾ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ನೂತನ ಶಾಖೆಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಿಯದರ್ಶಿನಿ ಸಹಕಾರ ಸಂಘದ ನಿರ್ದೇಶಕರ ಪ್ರಾಮಾಣಿಕ ಶ್ರಮ, ಉತ್ತಮ ಸೇವೆಯ ಫಲವಾಗಿ ಸಂಘವು ಎರಡನೇ ಖಾಖೆಯನ್ನು ತೆರೆಯುವಂತಾಗಿದೆ ಎಂದು ಶ್ಲಾಘಿಸಿದರು.

ನೂತನ ಶಾಖೆಯ ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ‌ ವಿನಯಕುಮಾರ್ ಸೊರಕೆ, ಬೆಳೆಯುತ್ತಿರುವ ಪಡುಬಿದ್ರೆಗೆ ಪ್ರಿಯದರ್ಶಿನಿ ಬ್ಯಾಂಕ್ ಉತ್ತಮ‌ ಕೊಡುಗೆ ನೀಡಿದೆ. ಕರಾವಳಿಯ ಮುಸ್ಸದ್ದಿಗಳು ಹುಟ್ಟು ಹಾಕಿದ್ದ ರಾಷ್ಟ್ರಿಕೃತ ಬ್ಯಾಂಕ್ ಗಳನ್ನು ವಿಲೀನ ಗೊಳಿಸುತ್ತಿರುವ ಸಂದರ್ಭದಲ್ಲಿ ಪ್ರಿಯದರ್ಶಿನಿ ಬ್ಯಾಂಕ್ ಜನರ ಆಶಾಭಾವನೆಗಳಿಗೆ ಒತ್ತು ಕೊಟ್ಟು ಮುನ್ನಡೆಯುತ್ತಿದೆ. 

ಇದರ ಜೊತೆಗೆ ಕರಾವಳಿಗರಿಗೆ ಉದ್ಯೋಗ ಸೃಷ್ಠಿಯನ್ನು ಮಾಡುವ ಮೂಲಕ ದೇಶದಲ್ಲಿನ ಬಡತನ ಹೋಗಲಾಡಿಸಲು ಬ್ಯಾಂಕ್ ಗಳು ಶ್ರಮಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಲ್ಕಿ ಸೀಮೆಯ ಅರಸು ದುಗ್ಗಣ್ಣ ಸಾವಂತರು, ಪ್ರಿಯದರ್ಶಿನಿ ಬ್ಯಾಂಕ್ ತನ್ಮ ಶಿಸ್ತು ಬದ್ಧ ಕಾರ್ಯವೈಖರಿ, ಉತ್ತಮ ಗ್ರಾಹಕರ ಸೇವೆಯ ಮೂಲಕ ಜನರ‌ ಮನಸ್ಸು ಗೆದ್ದಿದೆ. ಈ ಬ್ಯಾಂಕ್ ಕಳೆದ 15 ತಿಂಗಳ ಹಿಂದೆ ಆರಂಭವಾಗಿದ್ದರೂ ಬ್ಯಾಂಕ್‌ಎರಡನೇ ಶಾಖೆಯನ್ನು ತೆರೆಯುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಲಿದೆ ಎಂದು ನುಡಿದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಬಿ.‌ಜಯಕರ ಶೆಟ್ಟಿ ಇಂದ್ರಾಳಿ ಅವರು ಸಂಸ್ಥೆಯ ಮೊಬೈಲ್‌ ಬ್ಯಾಂಕಿಂಗ್ ಸೇವೆಗೆ ಚಾಲನೆ‌ ನೀಡಿದರು. ಕೆಪಿಸಿಸಿ ಪ್ರಧಾನ ಕಾರ್ಯರ್ಶಿ ಮಿಥುನ್ ರೈ ಅವರು ಪ್ರಿಯದರ್ಶಿನಿ ಸ್ವಸಹಾಯ ಗುಂಪುಗಳಿಗೆ ಚಾಲನೆ ನೀಡಿದರು.

ಪಡುಬಿದ್ರೆ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳ್ ಪ್ರಥಮ‌ ಠೇಚಣಿದಾರರಿಗೆ ಠೇವಣಿ ಪತ್ರ ವಿತರಿಸಿದರು. ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಲಕ್ಷ್ಮೀನಾರಾಯಣ ಅವರು ಗ್ರಾಹಕರ ಉಳಿತಾಯ ಖಾತೆಯ ಪಾಸ್ ಪುಸ್ತಕಗಳನ್ನು ವಿತರಿಸಿದರು.

ಘನುಪಸ್ಥಿತಿಯಲ್ಲಿ ಕರ್ನಾಟಕ ದೈವ ಶಾಸ್ತ್ರೀಯ ಮಹಾ ವಿದ್ಯಾಲಯ ಮಂಗಳೂರು ಇಲ್ಲಿನ ಪ್ರಾಂಶುಪಾಲರಾದ ರೆ. ಡಾ.  ಹ್ಯೂಬರ್ಟ್ ಎಂ. ವಾಟ್ಸನ್, ಪಾವಂಜೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಸೂರ್ಯಕುಮಾರ್, ಪಡುಬಿದ್ರೆ ಇಮಾಯತುಲ್ ಇಸ್ಲಾಂ ಸಂಘ ಹಾಗೂ ಶಾಲೆಯ ಸಂಚಾಲಕರಾದ ಶಬ್ಬೀರ್ ಹುಸೈನ್ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಉಡುಪಿ ಕುಕ್ಕಟ್ಟೆಯ ನಾದಶ್ರೀ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀಧರ ದೇವಾಡಿಗ, ಪಡುಬಿದ್ರೆ ಗ್ರಾಮ‌‌ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರೆ ಕೆಪಿಸಿಸಿ ಕೊ- ಆರ್ಡಿನೇಟರ್ ನವೀನ್ ಚಂದ್ರ‌ಶೆಟ್ಟಿ, ಪಡುಬಿದ್ರೆ ಗ್ರಾಮ‌ ಪಂಚಾಯತ್ ಮಾಜಿ ಅಧ್ಯಕ್ಷರಾದ ದಮಯಂತಿ ವಿ.‌ಅಮೀನ್, ಸಂಜೀವಿನಿ ಪೂಜಾರ್ತಿ, ಕಟ್ಟಡದ ಮಾಲಕರಾದ ಸುಧಾಕರ ದೇವಾಡಿಗ, ಪ್ರಿಯದರ್ಶಿಸಿ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎಚ್.‌ವಸಂತ್ ಬೆರ್ನಾರ್ಡ್, ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್, ಧನಂಜಯ ಮಟ್ಟು, ಗೌತಮ್‌ಜೈನ್,‌ಶರತ್ ಶೆಟ್ಟಿ ಪಂಚವಟಿ, ಉಮಾನಾಥ ಜೆ.‌ ಶೆಟ್ಟಿಗಾರ್, ಜೈಕೃಷ್ಣ ಕೋಟ್ಯಾನ್, ಗಣೇಶ್ ಪ್ರಸಾದ್ ದೇವಾಡಿಗ, ಧನ್ ರಾಜ್ ಕೋಟ್ಯಾನ್‌ ಸಸಿಹಿತ್ಲು, ಮಿರ್ಝಾ ಅಹ್ಮದ್‌, ಚಿರಂಜೀವಿ ಅಂಚನ್, ಶೆರಿಲ್ ಅಯೋನ ಐಮನ್, ಹರೀಶ್ ಎನ್.‌ ಪುತ್ರನ್, ನವೀನ್ ಸಾಲಿಯಾನ್‌ ಪಂಜ, ಸಂದೀಪ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಶಾಖಾ ಪ್ರಬಂಧಕಿ ಪ್ರಜ್ಞಶ್ರೀ ಮೊದಲಾದವರು ಉಪಸ್ಥಿತರಿದ್ದರು.

ಪ್ರಿಯದರ್ಶಿನಿ ಸಹಕಾರ ಸಂಘದ ನಿರ್ದೇಶಕ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಧನ್ಯವಾದ ಸಮರ್ಪಿಸಿದರು. ಪ್ರಕಾಶ್ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News