ಧೈರ್ಯ, ಸತ್ಯ, ನಂಬಿಕೆ ಬರುವವರೆಗೆ ಭಾರತ ಸುಭದ್ರವಾಗಲು ಸಾಧ್ಯವಿಲ್ಲ: ಹುಸೈನ್ ಮುಈನಿ ಮಾರ್ನಾಡ್

Update: 2022-08-29 17:26 GMT

ವಿಟ್ಲ : ಭಾರತವನ್ನಾಳಿದ ಯಾವುದೇ ರಾಜರುಗಳು ಇಸ್ಲಾಮಿಕ್ ರಾಷ್ಟ್ರವನ್ನಾಗಲಿ, ಹಿಂದೂ ರಾಷ್ಟ್ರವನ್ನಾಗಲಿ, ಕ್ರಿಶ್ಚಿಯನ್ ರಾಷ್ಟ್ರವನ್ನಾಗಲಿ ಕಟ್ಟಲಿಲ್ಲ, ಯಾಕೆಂದರೆ ಅದು ಇಲ್ಲಿ ನಡೆದುಕೊಂಡು ಬಂದ ಪರಂಪರೆಗೆ ವಿರುದ್ಧವಾಗಿತ್ತು ಎಂದು ಕೆಜಿಎನ್ ದಅವಾ ಕಾಲೇಜಿನ ಪ್ರೊ. ಹುಸೈನ್ ಅಹ್ಸನಿ ಅಲ್ ಮುಈನಿ ಮಾರ್ನಾಡ್‌ ಹೇಳಿದರು.

ಭಾರತದ ಅಮೃತ ಮಹೋತ್ಸವದ ಸಲುವಾಗಿ 1942 ರ ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣಾರ್ಥ ಎಸ್ ವೈಎಸ್ ಮಾಣಿ ಸೆಂಟರ್ ವತಿಯಿಂದ ಸೋಮವಾರ ಮಿತ್ತೂರು ಜಂಕ್ಷನ್ ನಲ್ಲಿ ಅಮೃತ ಭಾರತ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು ಭಾರತ ಸ್ವಾತಂತ್ರ್ಯಕ್ಕಾಗಿ ಹಿರಿಯರು ಮಾಡಿದ ತ್ಯಾಗ ಬಲಿದಾನಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಭಾರತವನ್ನು ಧರ್ಮ, ಜಾತಿ, ಪಂಗಡ, ಭಾಷೆ, ಪ್ರಾಂತ್ಯಗಳ ಹೆಸರಿನಲ್ಲಿ ವಿಭಜಿಸುವ ಪ್ರಯತ್ನಗಳು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದರೂ ಅದರಲ್ಲಿ ಯಶಸ್ಸು ಕಾಣಲು ಸಾಧ್ಯ ವಾಗಿಲ್ಲ. ಭಾರತದ ಭವ್ಯ ಸಂವಿಧಾನಕ್ಕೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಸಂರಕ್ಷಿಸುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.

ಎಸ್‌ವೈಎಸ್ ಮಾಣಿ ಸೆಂಟರ್ ಅಧ್ಯಕ್ಷ ಸುಲೈಮಾನ್ ಸಅದಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ವೈಎಸ್ ರಾಜ್ಯ ಕೌನ್ಸಿಲರ್ ಹಂಝ ಮದನಿ ಮಿತ್ತೂರು ದುಆಃ ನೆರವೇರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪತ್ರಕರ್ತ ಹಮೀದ್ ಕಂದಕ್ ಮಿತ್ತೂರು ಮಾತನಾಡಿ ಭಾರತದ ಸ್ವಾತಂತ್ರ್ಯ್ಕಾಗಿ ಹಲವರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ, ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗುತ್ತಿದೆ ಇಂದು ಈ ದೇಶಕ್ಕೆ ಮಾಡುವ ದ್ರೋಹ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಣಿ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಆಳ್ವ ಕೋಡಾಜೆ, ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್, ಮಿತ್ತೂರು ಬ್ರಾಂಚ್ ಎಸ್ ವೈಎಸ್ ಅಧ್ಯಕ್ಷ ಸಿದ್ದೀಕ್ ಸಅದಿ, ಎಸ್ ವೈಎಸ್ ಜಿಲ್ಲಾ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ಶುಭ ಹಾರೈಸಿದರು.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ, ಎಸ್‌ವೈಎಸ್ ದ.ಕ.ಈಸ್ಟ್  ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ನೇರಳಕಟ್ಟೆ, ಜಿಲ್ಲಾ ಸಾಂತ್ವನ ಕಾರ್ಯದರ್ಶಿ ಸ್ವಾಲಿಹ್ ಮುರ,  ಸೆಂಟರ್ ಉಪಾಧ್ಯಕ್ಷ ಯೂಸುಫ್ ಹಾಜಿ ಸೂರಿಕುಮೇರ್, ಕೋಶಾಧಿಕಾರಿ ದಾವೂದ್ ಕಲ್ಲಡ್ಕ, ಸಾಂತ್ವನ ಕಾರ್ಯದರ್ಶಿ ಎಸ್.ಎ.ಸುಲೈಮಾನ್ ಸೂರಿಕುಮೇರ್, ಸಾಮಾಜಿಕ ಕಾರ್ಯದರ್ಶಿ ಅಬ್ಬಾಸ್ ಗಡಿಯಾರ ಸಂಘಟನಾ ಕಾರ್ಯದರ್ಶಿ ಹಬೀಬ್ ಶೇರ, ಅಹ್ಮದ್ ಮದನಿ ನೇರಳಕಟ್ಟೆ ಇಸ್ಮಾಯಿಲ್ ಮದನಿ ನೇರಳಕಟ್ಟೆ, ಕೆಜಿಎನ್ ದ‌ಅ್‌ವಾ ಪ್ರಾಧ್ಯಾಪಕ ಸ್ವಾದಿಕ್ ಮುಈನಿ ಗಡಿಯಾರ, ರಝಾಕ್ ಮುಸ್ಲಿಯಾರ್ ಮೊದಲಾದವರು  ಭಾಗವಹಿಸಿದ್ದರು.

ಎಸ್‌ವೈಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಪೇರಮೊಗರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್‌ವೈಎಸ್ ಮಿತ್ತೂರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ರಝಾಕ್ ಸಅದಿ ವಂದಿಸಿದರು, ಕೆಜಿಎನ್ ಜೂನಿಯರ್ ದಅವಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News