×
Ad

ಚೀನಾವನ್ನು ಎದುರಿಸುವಲ್ಲಿ ಭಾರತದ ಪಾತ್ರ ನಿರ್ಣಾಯಕ: ಅಮೆರಿಕ

Update: 2022-08-29 23:06 IST

US Chief of Naval Operations Admiral Mike Gilday
 

ವಾಷಿಂಗ್ಟನ್, ಆ.29: ಭಾರತವು ಭವಿಷ್ಯದಲ್ಲಿ ಅಮೆರಿಕಕ್ಕೆ ನಿರ್ಣಾಯಕ ಪಾಲುದಾರನಾಗಲಿದೆ ಮತ್ತು ಚೀನಾವನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಮೆರಿಕದ ನೌಕಾ ಕಾರ್ಯಾಚರಣೆಗಳ ಮುಖ್ಯಸ್ಥ ಅಡ್ಮಿರಲ್ ಮೈಕ್ ಗಿಲಾಡಿ ಹೇಳಿದ್ದಾರೆ.

ಭಾರತವು ಭವಿಷ್ಯದಲ್ಲಿ ಅಮೆರಿಕದ ಕಾರ್ಯತಂತ್ರದ ಪಾಲುದಾರ ಎಂದು ಪರಿಗಣಿಸಿರುವುದರಿಂದ ಇತರ ಯಾವುದೇ ದೇಶಕ್ಕಿಂತ ಭಾರತಕ್ಕೆ ಅತ್ಯಧಿಕ ಬಾರಿ ತಾನು ಭೇಟಿ ನೀಡಿದ್ದೇನೆ ಎಂದು ವಾಷಿಂಗ್ಟನ್‌ನಲ್ಲಿ ಹೆರಿಟೇಜ್ ಫೌಂಡೇಷನ್‌ನ ಆಶ್ರಯದಲ್ಲಿ ನಡೆದ ವಿಚಾರಸಂಕಿರಣದಲ್ಲಿ ಗಿಲಾಡಿ ಹೇಳಿದ್ದಾರೆ.

ಹಿಂದು ಮಹಾಸಾಗರದ ಯುದ್ಧಭೂಮಿಯು ನಮಗೆ ಹೆಚ್ಚು ಪ್ರಾಮುಖ್ಯವಾಗಿದೆ. ಗಡಿ ಭಾಗದಲ್ಲಿ ಭಾರತ-ಚೀನಾ ನಡುವೆ ನಡೆದಿರುವ ಚಕಮಕಿಯೂ ಕಾರ್ಯತಂತ್ರದ ದೃಷ್ಟಿಯಲ್ಲಿ ಮಹತ್ವದ್ದಾಗಿದೆ. ಇದರಿಂದ ಈಗ ಚೀನಾವು ಪೂರ್ವ, ದಕ್ಷಿಣ ಚೀನಾ ಸಮುದ್ರ ಪ್ರದೇಶ ಮತ್ತು ತೈವಾನ್ ಜಲಸಂಧಿಯಲ್ಲಿ ಮಾತ್ರವಲ್ಲ, ತಮ್ಮ ಭುಜದ ಮೇಲಿಂದ ಭಾರತದ ಮೇಲೆಯೂ ಒಂದು ಕಣ್ಣಿಡುವ ಪರಿಸ್ಥಿತಿಯಿದೆ. ಈಗ ಭಾರತವು ಹಿಮಾಲಯ ಗಡಿಭಾಗದತ್ತ ಚೀನಾದ ಗಮನ ಸೆಳೆಯಬೇಕಿದೆ ಎಂದು ಗಿಲಾಡಿ ಹೇಳಿದ್ದಾರೆ.

ಜೂನ್‌ನಲ್ಲಿ ಜಪಾನ್ ದೇಶದಲ್ಲಿ ನಡೆದಿದ್ದ ಕ್ವಾಡ್ ಸಭೆಯಲ್ಲಿ ಮಾತನಾಡಿದ್ದ ಅಮೆರಿಕ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ ಎಲ್‌ಬ್ರಿಡ್ಜ್ ಕೋಲ್ಬಿ, ತೈವಾನ್ ವಿಷಯದಲ್ಲಿ ನಡೆಯುವ ಸ್ಥಳೀಯ ಯುದ್ಧದಲ್ಲಿ ಭಾರತ ನೇರ ಕೊಡುಗೆ ನೀಡಲು ಆಗದಿದ್ದರೂ, ಚೀನಾದ ಗಮನವನ್ನು ಹಿಮಾಲಯ ಗಡಿಪ್ರದೇಶದತ್ತ ಸೆಳೆಯಲು ಸಾಧ್ಯವಿದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News