×
Ad

ತಾಂತ್ರಿಕ ವೈಫಲ್ಯ: ನಾಸಾ ಚಂದ್ರಯಾನದ ರಾಕೆಟ್ ಪರೀಕ್ಷೆ ಮುಂದೂಡಿಕೆ

Update: 2022-08-29 23:58 IST
PHOTO SOURCE:  NASA

ವಾಷಿಂಗ್ಟನ್, ಆ.29: ನಾಸಾದ ಮಹಾತ್ವಾಕಾಂಕ್ಷೆಯ ಚಂದ್ರಯಾನಕ್ಕೆ ಪೂರಕವಾಗಿ ನಡೆಸಲುದ್ದೇಶಿಸಿದ್ದ ಬೃಹತ್ ರಾಕೆಟ್‌ನ ಪ್ರಯೋಗಾರ್ಥ ಪರೀಕ್ಷೆಯನ್ನು ತಾಂತ್ರಿಕ ವೈಫಲ್ಯದಿಂದ ಮುಂದೂಡಲಾಗಿದೆ ಎಂದು ನಾಸಾದ ಅಧಿಕಾರಿಗಳು ಘೋಷಿಸಿದ್ದಾರೆ.

ನಾಸಾ(ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ)ವು ನಿರ್ಮಿಸಿರುವ 322 ಅಡಿ ಉದ್ದದ ‘ಆರ್ಟೆಮಿಸ್-1’ ರಾಕೆಟ್‌ನ ನಾಲ್ಕು ಆರ್‌ಎಸ್-25 ಇಂಜಿನ್‌ಗಳಲ್ಲಿ ಒಂದರಲ್ಲಿ ಹವಾಮಾನ ಸಮಸ್ಯೆ ಕಂಡುಬಂದ ಬಳಿಕ ಅಂತಿಮ ಕ್ಷಣದಲ್ಲಿ ಪ್ರಯೋಗಾರ್ಥ ಪರೀಕ್ಷೆಯನ್ನು ಮುಂದೂಡಲಾಗಿದ್ದು ಸೆಪ್ಟಂಬರ್ 2 ಅಥವಾ 5ರಂದು ಮತ್ತೆ ಉಡ್ಡಯನ ನಡೆಯಲಿದೆ ಎಂದು ನಾಸಾದ ಅಧಿಕಾರಿಗಳು ಹೇಳಿದ್ದಾರೆ.

ರಾಕೆಟ್‌ನ ಉಡಾವಣೆಯನ್ನು ಕಣ್ತುಂಬಿಸಿಕೊಳ್ಳಲು ಫ್ಲೋರಿಡಾದ ಕೆನೆಡಿ ಬಾಹ್ಯಾಕಾಶ ಕೇಂದ್ರದ ಬಳಿಯ ಬೀಚ್‌ನಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಸಾವಿರಾರು ಜನ ಸೇರಿದ್ದರು. ಅಪೋಲೋ 17 ಗಗನನೌಕೆಯ ಮೂಲಕ ಗಗನಯಾತ್ರಿಗಳು ಚಂದ್ರನ ಅಂಗಳಕ್ಕೆ ಕಾಲಿರಿಸಿದ 50 ವರ್ಷದ ಬಳಿಕ ನಾಸಾದ ಹೊಸ ಯೋಜನೆ ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News