×
Ad

ಜಮೀಯ್ಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Update: 2022-08-30 18:32 IST

ಕಾಪು : ಜಮೀಯ್ಯತುಲ್ ಫಲಾಹ್ ಕಾಪು ಘಟಕದ ವತಿಯಿಂದ ಝಕಾತ್ ಪಡೆಯಲು ಅರ್ಹರಾಗಿರುವ ಪ್ರಥಮ ವರ್ಷದ ಪಿಯುಸಿಗೆ ದಾಖಲೆ ಪಡೆದಿರುವ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ  ( ಸ್ಕಾಲರ್ ಶಿಪ್) ನೀಡುವ ಬಗ್ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಬರಹದ ಮೂಲಕ ಅರ್ಜಿಯೊಂದಿಗೆ, ಪಿಯುಸಿಗೆ ದಾಖಲಾಗಿರುವ ದಾಖಲೆಯ ಪ್ರತಿ ಹಾಗೂ ಪಾಸ್ ಪೋರ್ಟ್ ಸೈಝಿನ ಒಂದು ಫೋಟೋ, ಆಧಾರ್ ಕಾರ್ಡ್ ಪ್ರತಿ, ಮೊಬೈಲ್ ನಂಬರ್ ನ್ನು ನಮೂದಿಸಿ, ಅರ್ಜಿಯನ್ನು ಕಾಪು ಸಿಟಿ ಸೆಂಟರ್ ನ ಮೊದಲ ಮಹಡಿಯಲ್ಲಿರುವ  ಜಮೀಯ್ಯತುಲ್ ಫಲಾಹ್ ಕಚೇರಿಗೆ ತಲುಪಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10.09.2022. ಆಗಿರುತ್ತದೆ ಎಂದು ಜೆಎಫ್ ಕಾಪು ಘಟಕದ ಪತ್ರಿಕಾ ಕಾರ್ಯದರ್ಶಿ ಅನ್ವರ್ ಅಲಿ ಕಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News