×
Ad

ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್

Update: 2022-08-31 14:53 IST

ಉಡುಪಿ; ಕೇಂದ್ರ ಬಂದರು, ಜಲಮಾರ್ಗ, ಆಯುಷ್ ಇಲಾಖೆ ಸಚಿವ ಸರ್ಬಾನಂದ ಸೋನೊವಾಲ್ ಬುಧವಾರ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಸಚಿವರನ್ನು ಸ್ವಾಗತಿಸಿ ಶಾಲು ಹೊದಿಸಿ , ಶ್ರೀಕೃಷ್ಣನ ಪ್ರಸಾದ ನೀಡಿ ಸನ್ಮಾನಿಸಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ,ಪರ್ಯಾಯ ಮಠದ ವ್ರಜನಾಥ ಆಚಾರ್ಯ ,ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News