×
Ad

ವಿದ್ಯಾರ್ಥಿಗಳಲ್ಲಿ ಮೌಲ್ಯ, ಕಾಳಜಿ ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯ: ಎ.ಬಿ.ಇಬ್ರಾಹೀಂ

Update: 2022-09-01 16:11 IST

ಪುತ್ತೂರು, ಸೆ.1: ವಿದ್ಯಾರ್ಥಿಗಳ ಶೈಕ್ಷಣಿಕ ಗುರಿ ನಿಶ್ಚಯಿಸಲು ಕೌನ್ಸಿಲಿಂಗ್, ಅವರನ್ನು ನಿರಂತರ ಮಾನಿಟರಿಂಗ್ ಮಾಡುವ ಕಾಲ್ ಸೆಂಟರ್, ಅವರಲ್ಲಿ ವಿಷಯ ಪರಿಣತಿಯ ಜೊತೆಗೆ ಮೌಲ್ಯ ಮತ್ತು ಕಾಳಜಿ ಬೆಳೆಸುತ್ತಿರುವ ಕಮ್ಯೂನಿಟಿ ಸೆಂಟರಿನ ಪ್ರಯತ್ನ ಶ್ಲಾಘನೀಯ ಎಂದು ನಿವೃತ್ತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪುತ್ತೂರಿನ ಕಮ್ಯೂನಿಟಿ ಸೆಂಟರ್ ವತಿಯಿಂದ ಸರಕಾರಿ ಇಲಾಖೆಗೆ ಸೇರಲಿಚ್ಛಿಸುವ ಆಸಕ್ತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮಾಹಿತಿ ಶಿಬಿರವನ್ನು ಸೆಂಟರ್ ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

 ಇದೇ ವೇಳೆ ಕಮ್ಯೂನಿಟಿ ಸೆಂಟರ್ ಆಯೋಜಿಸಿದ್ದ ಮರ್ಹೂಂ ಮಮ್ಮುಂಞಿ ಹಾಜಿ ಪುತ್ತೂರು ಮತ್ತು ಮರ್ಹೂಂ ಯು.ಕೆ.ಇಬ್ರಾಹೀಂ ಹಾಜಿ ಉಳ್ಳಾಲ ಕುರಿತ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು.

 ಶ್ರೀ ಮಾತಾ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಭಾಗ್ಯೇಶ್ ರೈ ಸರಕಾರಿ ಉದ್ಯೋಗಾವಕಾಶಗಳು, ಪ್ರವೇಶಾತಿ ಮತ್ತು ಅರ್ಹತಾ ಪರೀಕ್ಷೆ, ಅದಕ್ಕಿರುವ ಪೂರ್ವ ತಯಾರಿ ಮತ್ತು ಆಸಕ್ತಿಗಳನ್ನು ಬೆಳೆಸುವುದು ಹೇಗೆ ಎಂಬ ಕುರಿತು ಸಮರ್ಪಕ ಮಾಹಿತಿ ನೀಡಿದರು. ಬಳಿಕ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಎ.ಬಿ.ಇಬ್ರಾಹೀಂ ಮತ್ತು ನಿವೃತ್ತ ಎಸಿಎಫ್ ಮುಹಮ್ಮದ್ ಬ್ಯಾರಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ರಾಜ್ಯ ಎಸ್‌ಡಿಎಂಸಿ ಸಮನ್ವಯ ಸಮಿತಿ ಅಧ್ಯಕ್ಷ ಮೊಯ್ದಿನ್ ಕುಟ್ಟಿ, ಕಮ್ಯೂನಿಟಿ ಸೆಂಟರಿನಲ್ಲಿ ವಿದ್ಯಾರ್ಥಿಗಳ ಕೌನ್ಸಿಲಿಂಗ್ ನಡೆಸುತ್ತಿರುವ ರಫೀಕ್ ಮಾಸ್ಟರ್, ಮೌಲಾನ ಆಝಾದ್ ಶಾಲೆಯ ಅಧ್ಯಾಪಕ ಮುಹಮ್ಮದ್ ತೌಸೀಫ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ವಝೀರ್ ಅಹ್ಮದ್ ಅವರನ್ನು ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News