ಬಂಟ್ವಾಳ: ಕಾರು-ಲಾರಿ ನಡುವೆ ಅಪಘಾತ; ನಾಲ್ವರಿಗೆ ಗಾಯ
Update: 2022-09-01 18:18 IST
ಬಂಟ್ವಾಳ: ತಾಲೂಕಿನ ಬುಡೋಳಿಯಲ್ಲಿ ಗುರುವಾರ ಸಂಜೆ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ವಿಶ್ವ, ನಾಗರಾಜ್, ಅಶೋಕ್ ಹಾಗೂ ಮತ್ತೋರ್ವ ಗಾಯಗೊಂಡಿದ್ದು, ಕಾರು ಚಾಲಕ ವಿಶ್ವ ಎಂಬವರಿಗೆ ತೀವೃ ಸ್ವರೂಪದ ಗಾಯವಾಗಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮೂವರನ್ನು ಮಂಗಳೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಟ್ಯಾಂಕರ್ ಲಾರಿ ಮತ್ತು ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಮಧ್ಯೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸೋಷಿಯಲ್ ಇಕ್ವ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.