ಮೋದಿ, ಆಂಧ್ರ ಸಿಎಂ, ಗೌತಮ್ ಅದಾನಿ ವಿರುದ್ಧ ಭಾರತ ಮೂಲದ ಅಮೆರಿಕದ ವೈದ್ಯನಿಂದ ಮೊಕದ್ದಮೆ ದಾಖಲು

Update: 2022-09-01 18:20 GMT

ಹೊಸದಿಲ್ಲಿ, ಸೆ. 1: ಭ್ರಷ್ಟಾಚಾರ ಹಾಗೂ ಪೆಗಾಸಸ್ ಸ್ಪೈವೇರ್ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ ರೆಡ್ಡಿ ಹಾಗೂ ಉದ್ಯಮಿ ಗೌತಮ್ ಅದಾನಿ ವಿರುದ್ಧ ಭಾರತ ಮೂಲದ ಅಮೆರಿಕದ ವೈದ್ಯರೊಬ್ಬರು ಮೊಕದ್ದಮೆ ದಾಖಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕದ ಕೊಲಂಬಿಯಾ ಜಿಲ್ಲಾ ನ್ಯಾಯಾಲಯ ಈ ಎಲ್ಲ ನಾಯಕರು ಹಾಗೂ ಇತರ ನಾಯಕರಿಗೆ ಸಮನ್ಸ್ ಜಾರಿ ಮಾಡಿದೆ. ಆದರೆ, ಈ ಅರ್ಜಿಗೆ ಯಾವುದೇ ಕಿಮ್ಮತ್ತಿಲ್ಲ ಎಂದು ಭಾರತೀಯ ಮೂಲದ ಅಮೆರಿಕದ  ವಕೀಲ ರವಿ ಬಾತ್ರಾ ಅವರು ಹೇಳಿದ್ದಾರೆ.

ಮೋದಿ, ರೆಡ್ಡಿ ಹಾಗೂ ಅದಾನಿ ವಿರುದ್ಧ ರಿಚ್‌ಮಂಡ್ ಮೂಲದ ವೈದ್ಯ ಡಾ. ಲೋಕೇಶ್ ವುಯುರು ಈ ಮೊಕದ್ದಮೆ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News