×
Ad

ಬಂಟ್ವಾಳ; ಹೆಜ್ಜೇನು ದಾಳಿ: ಬಾಲಕ ಮೃತ್ಯು

Update: 2022-09-02 07:32 IST

ಬಂಟ್ವಾಳ, ಸೆ. 2: ಹೆಜ್ಜೇನು ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಬಾಲಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಕಳಾಯಿಯಲ್ಲಿ ನಡೆದಿದೆ. 

ಕಳಾಯಿ ತಾಳಿಪಾಡಿ ನಿವಾಸಿ ಹಕೀಂ ಎಂಬವರ ಪುತ್ರ ಮಾಝಿನ್ (12) ಮೃತ ಬಾಲಕ. 

ಗುರುವಾರ ಸಂಜೆ ಮನೆಯ ಬಳಿ ಆಟವಾಡುತ್ತಿದ್ದ ಮಾಝಿನ್ ಮೇಲೆ ಹೆಜ್ಜೇ‌ನು ದಾಳಿ ನಡೆಸಿದ್ದು, ತೀವ್ರ ಅಸ್ವಸ್ಥನಾಗಿದ್ದ ಬಾಲಕನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News