ಅರ್ಜೆಂಟೀನಾ ಉಪಾಧ್ಯಕ್ಷರ ಹತ್ಯಾ ಯತ್ನ: ಘಟನೆ ವಿಡಿಯೋ ವೈರಲ್

Update: 2022-09-02 15:24 GMT

ಬ್ಯೂನಸ್ ಐರಿಸ್: ಅರ್ಜೆಂಟೀನಾದ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್‌ಗೆ ಗುಂಡು ಹಾರಿಸಲು ವ್ಯಕ್ತಿಯೊಬ್ಬ ವಿಫಲ ಯತ್ನ ನಡೆಸಿರುವ ಘಟನೆ ವರದಿಯಾಗಿದೆ. ಅದೃಷ್ಟವಶಾತ್‌ ಬಂದೂಕಿನಿಂದ ಗುಂಡು ಸಿಡಿಯದ ಕಾರಣ ಕ್ರಿಸ್ಟಿನಾ ಬದುಕುಳಿದಿದ್ದಾರೆ ಎಂದು ಜೀವಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಕ್ರಿಸ್ಟಿನಾ ಅವರು ತಮ್ಮ ಮನೆಯ ಹೊರಗೆ ಬೆಂಬಲಿಗರ ನಡುವೆ ಹಾಜರಿದ್ದರು. ಅದೇ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಬಂದೂಕು ತೋರಿಸಿದ್ದಾನೆ.

 ಇದ್ದಕ್ಕಿದ್ದಂತೆ ಕ್ರಿಸ್ಟಿನಾ ಹತ್ತಿರ ಬಂದ ದಾಳಿಕೋರ, ಅವರ ಮುಖಕ್ಕೆ ನೇರವಾಗಿ ಬಂದೂಕನ್ನು ಇಟ್ಟಿದ್ದಾನೆ, ಈ ಘಟನೆ ವಿಡಿಯೋ ಈಗ ವೈರಲ್‌ ಆಗಿದೆ. ಘಟನಾ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಆತನನ್ನು ವಶಕ್ಕೆ ಪಡೆದಿದ್ದಾರೆ.

ದಾಳಿಕೋರ ದಾಳಿಗೆ ಯತ್ನಿಸಿದ ಬಂದೂಕಿನಲ್ಲಿ ಐದು ಗುಂಡುಗಳಿದ್ದವು ಎಂದು ಅರ್ಜೈಂಟೀನಾ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್ ಹೇಳಿದ್ದಾರೆ. ಟ್ರಿಗರ್ ಅಂಟಿಕೊಂಡಿದ್ದರಿಂದ ಗುಂಡು ಹಾರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಕ್ರಿಸ್ಟಿನಾ ಅವರ ಜೀವವನ್ನು ಉಳಿದಿದೆ. ಆರೋಪಿ ಬ್ರೆಜಿಲ್ ನಿವಾಸಿ ಎಂದು ತಿಳಿಸಿದ್ದಾರೆ. ಆತನ  ಹೆಸರು ಫರ್ನಾಂಡೋ ಆಂಡ್ರೆ ಸಬಾಗ್ ಮೊಂಟಿಯೆಲ್ ಎಂದು ತಿಳಿದು ಬಂದಿದೆ,

ಕ್ರಿಸ್ಟಿನಾ 2007-2015ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಈ ವೇಳೆ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಆ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ಕ್ರಿಸ್ಟಿನಾ ವಿರುದ್ಧ ನಡೆಯುತ್ತಿರುವ ಪ್ರಕರಣವನ್ನು ವಿರೋಧಿಸಿ ಅವರ ಬೆಂಬಲಿಗರು ಅವರ ಮನೆಯ ಹೊರಗೆ ರ್ಯಾಲಿ ನಡೆಸುತ್ತಿದ್ದರು. ಈ ವೇಳೆ ಈ ಘಟನೆ ನಡೆದಿದೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News