×
Ad

ಕೋಟ; 10 ಲಕ್ಷ ರೂ. ನೀಡುವಂತೆ ಬೆದರಿಕೆ ಕರೆ: ದೂರು

Update: 2022-09-02 20:15 IST

ಕೋಟ, ಸೆ.2: ವಾಟ್ಸಾಪ್ ಕರೆ ಮಾಡಿ 10 ಲಕ್ಷ ರೂ. ನೀಡುವಂತೆ ಕೊಲೆ ಬೆದರಿಕೆಯೊಡ್ಡಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಜಿತ್ ಕುಮಾರ್ ಶೆಟ್ಟಿ ಎಂಬವರಿಗೆ ಆ.31ರಂದು ಸಂಜೆ ವೇಳೆ ನಾನು ಭರತ್ ದಾಸ್ ಎಂದು ಹೇಳಿಕೊಂಡು ವಾಟ್ಸಾಪ್ ಕರೆ ಮಾಡಿದ್ದು, ತನಗೆ 10 ಲಕ್ಷ ರೂ. ಹಣವನ್ನು ಕೂಡಲೇ ನೀಡಬೇಕು, ಇಲ್ಲದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ನಂತರ ಆತ ವಾಟ್ಸಾಪ್‌ನಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ ವಾಯ್ಸ್ ರೆಕಾರ್ಡ್ ಕಳುಹಿಸಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News