×
Ad

ಮಂಗಳೂರು | ರಸ್ತೆ ಅಪಘಾತ: ವ್ಯಕ್ತಿ ಸ್ಥಳದಲ್ಲೇ ಮೃತ್ಯು

Update: 2022-09-03 09:40 IST
ನಿಝಾಮುದ್ದೀನ್ - ಮೃತ ವ್ಯಕ್ತಿ 

ಮಂಗಳೂರು, ಸೆ.3: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ಕಲ್ಲಾಪು ಮಾರುಕಟ್ಟೆ ಬಳಿ ಶನಿವಾರ ಬೆಳಗಿನ ಜಾವ ನಡೆದಿದೆ.

ಮೃತರನ್ನು ಬೆಂಗರೆ ನಿವಾಸಿ ನಿಯಾಝ್ ( 48) ಎಂದು ಗುರುತಿಸಲಾಗಿದೆ.

ಇದನ್ನೂ ಓದಿಗುಜರಾತ್ ಸ್ಫೋಟ ಪ್ರಕರಣ; ಮರಣ ದಂಡನೆ ಶಿಕ್ಷೆಗೊಳಗಾದ 30 ಮಂದಿ ಮೇಲ್ಮನವಿ

ಕಲ್ಲಾಪು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಇಂದು ಬೆಳಗ್ಗಿನ ಜಾವ 4.10ರ ಸುಮಾರಿಗೆ  ಕಲ್ಲಾಪುವಿನಲ್ಲಿರುವ ಮನೆಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಮೀನಿನ ಲಾರಿಯೊಂದು ಢಿಕ್ಕಿ ಹೊಡೆದಿದೆ. ಲಾರಿಯ ಟೈಯರ್ ಸ್ಫೋಟಗೊಂಡು  ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಬೆಂಗರೆ ನಿವಾಸಿಯಾಗಿದ್ದ ನಿಯಾಝ್ ಕಲ್ಲಾಪುವಿನ ಬಾಡಿಗೆ ಮನೆಗೆ ಬಂದು ನೆಲೆಸಿದ್ದರು ಎಂದು ತಿಳಿದು ಬಂದಿದೆ.

ಈ ಸಂಬಂಧ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News