×
Ad

ಸೆ.4ರಂದು ಬಂಟ್ವಾಳ ಕುಲಾಲ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಚಾಲನೆ

Update: 2022-09-03 10:28 IST

ಬಂಟ್ವಾಳ, ಸೆ.3: ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ಕುಲಾಲ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಚಾಲನೆ ಕಾರ್ಯಕ್ರಮ ಸೆ.4ರಂದು ಬೆಳಗ್ಗೆ 10:30ಕ್ಕೆ ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಸಿ. ಪೆರ್ನೆ ಹೇಳಿದರು. 

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಧಾಮದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಲಿದ್ದಾರೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀವಾಸ ಪೂಜಾರಿ ಕಾಮಗಾರಿಗೆ ಚಾಲನೆ ನೀಡವರು ಎಂದರು. 

ಬಂಟ್ವಾಳ ಶಾಸಕ ರಾಜೇಶ್ ನಾಕ್ ಶಿಲಾಫಲಕ ಅನಾವರಣ ಗೊಳಿಸುವರು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಕುಂಭಧಿ ಸಂಚಯಕ್ಕೆ ಚಾಲನೆ ನೀಡುವರು, ಮಾಜಿ ಸಚಿವ ಬಿ.ರಮಾನಾಥ ರೈ ಕಟ್ಟಡ ವಿನ್ಯಾಸ ಅನಾವರಣಗೊಳಿಸುವರು ಎಂದು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕುಲಾಲ ಮಾತೃ  ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ರಿ. ಮಂಗಳೂರು ಇದರ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಪುರಸಭಾ ಸದಸ್ಯೆ ಶೋಭಾ ಹರಿಶ್ಚಂದ್ರ ಭಾಗವಹಿಸುವರು. ಕಾರ್ಯಕ್ರಮದಲ್ಲಿ ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಅಣ್ಣಯ್ಯ ಕುಲಾಲ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. 

1978ರಲ್ಲಿ ಸ್ಥಾಪನೆಯಾದ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಮಯ್ಯರ ಬೈಲುವಿನಲ್ಲಿ ಕಚೇರಿ ಹೊಂದಿ ಕಾರ್ಯರ್ವಹಿಸಿಕೊಂಡು ಬರುತ್ತಿತ್ತು. ಕುಲಾಲ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದರ ಜೊತೆಗೆ ಸಮಾಜದ ಬಂಧುಗಳ ಕಷ್ಟಗಳಿಗೆ ಸ್ಪಂದಿಸುತ್ತಾ ಹಿರಿಯರ ಮಾರ್ಗದರ್ಶನದೊಂದಿಗೆ  ನಮ್ಮ ಸಂಘ ಮುನ್ನಡೆದುಕೊಂಡು ಬಂದಿರುತ್ತದೆ ಎಂದರು. 

ಸಂಘದ ಕಾರ್ಯಚಟುವಟಿಕೆಗಳಿಗೆ ಪೂರಕವಾಗುವಂತೆ ಹಾಗೂ ಸ್ವಂತ ಸಭಾಭವನವೊಂದನ್ನು ನಿರ್ಮಿಸಬೇಕೆಂಬ ಸಮಾಜ ಬಂಧುಗಳ ಬೇಡಿಕೆಯಂತೆ ಪೊಸಳ್ಳಿಯಲ್ಲಿ ಜಮೀನು ಖರೀದಿ ಹಾಗೂ ದಾನರೂಪವಾಗಿ ಬಂದ ಜಮೀನಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದ ನೆಲ ಅಂತಸ್ತಿನ ಸಭಾ ಭವನವನ್ನು ರ್ಮಿಸಲಾಗಿದೆ. ಕುಲಾಲ ಬಂಧುಗಳು ಮಾತ್ರವಲ್ಲದೆ ಎಲ್ಲಾ ಸಮುದಾಯದ ಬಂಧುಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಈ ಸಭಾ ಭವನವನ್ನು ಬಾಡಿಗೆ ನೀಡುತ್ತಾ ಬರಲಾಗುತ್ತಿದೆ ಎಂದು ಹೇಳಿದರು. 

ಈಗಿರುವ ಸಭಾ ಭವನದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಸಭಾಭವನವನ್ನು ವಿಸ್ತರಿಸಿ ಮೇಲಂತಸ್ತಿನ ಕಟ್ಟಡ ನಿರ್ಮಿಸುವ ಬಗ್ಗೆ ಸಂಘದ ಸದಸ್ಯರಿಂದ ಬಂದ ಸಲಹೆಯಂತೆ ಕಟ್ಟಡ ರ್ಮಾಣದ ಬಗ್ಗೆ ಚಿಂತಿಸಿ  ಕಟ್ಟಡ ಸಮಿತಿಯನ್ನು ರಚಿಸಿ ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲಂತಸ್ತಿನ ಕಟ್ಟಡ ರ್ಮಿಸಲು ಸಂಘ ಯೋಜನೆ ರೂಪಿಸಿ ಕಾಯೋನ್ಮುಖವಾಗಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸುವ ಟ್ಟಿನಲ್ಲಿ ಪ್ರಾರಂಭಿಕವಾಗಿ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಚಾಲನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. 

ಕುಲಾಲ ಸಮುದಾಯ ಭವನ ಕಟ್ಟಡ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಲಾಲ್, ಕಾರ್ಯದರ್ಶಿ ಸುಕುಮಾರ್ ಬಂಟ್ವಾಳ, ತಾಲೂಕು ಕುಲಾಲ ಸಂಘದ ಪ್ರಮುಖರಾದ ಸುಂದರ ಬಿ., ಸತೀಶ್ ಬಿ., ಮಚ್ಚೇಂದ್ರ ಸಾಲ್ಯಾನ್, ಸದಸ್ಯರಾದ ಮನೋಹರ ನೇರಂಬೋಳು, ದಯಾನಂದ ನೇರಂಬೋಳು, ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ಲಿಂಗಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News