ಸೆ.5ರಂದು ಸ್ನೇಹಾಲಯ ವ್ಯಸನ ಮುಕ್ತ ಕೇಂದ್ರಕ್ಕೆ ಶಿಲಾನ್ಯಾಸ
ಮಂಗಳೂರು: ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿರುವ ಸ್ನೇಹಾಲಯ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲುದ್ದೇಶಿಸಿರುವ ಸ್ನೇಹಾಲಯ ವ್ಯಸನ ಮುಕ್ತಿ ಕೇಂದ್ರಕ್ಕೆ ಸೆ.5ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಸ್ನೇಹಾಲಯದ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಕಾರ್ಯ ಕ್ರಮದಲ್ಲಿ ವಿನಯ ಗುರೂಜಿ ಆರ್ಶೀವಚನ ನೀಡಲಿದ್ದಾರೆ. ಕಿನ್ನಿಗೋಳಿ ಚರ್ಚ್ ನ ಧರ್ಮ ಗುರುಗಳಾದ ವಂ.ಫೌಸ್ಟಿನ್ ಎಲ್ ಲೋಬೊ ಶಿಲಾನ್ಯಾಸ ಮಾಡಲಿದ್ದಾರೆ. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷ ತೆ ವಹಿಸಲಿದ್ದಾರೆ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸೆ.5 ಸಂತ ಮದರ್ ಥೆರೆಸಾ ಅವರ 25ನೆ ಸಂಸ್ಮರಣಾ ದಿನದಂದು ಮಂಜೇಶ್ವರ ದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಹಾಗೂ ಶಾಂತಿಧಾಮ ವೃದ್ಧಾಶ್ರಮ ಬಳಿ ಸ್ನೇಹಾಲಯ ವ್ಯಸನ ಮುಕ್ತಿ ಕೇಂದ್ರದ ನಿರ್ಮಾಣ ಯೋಜನೆ ಚಾಲನೆಗೊಂಡು ಮುಂದಿನ ಎರಡು ವರ್ಷಗಳಲ್ಲಿ ನಿರ್ಮಾಣ ವಾಗಲಿದೆ ಎಂದು ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.
ದೈಹಿಕ ಮತ್ತು ಮಾನಸಿಕ ಆರೋಗ್ಯ ದ ಸಮಸ್ಯೆ ಗಳಿಂದ ವೈಯಕ್ತಿಕ, ಸಾಮಾಜಿಕ, ಕೌಟುಂಬಿಕ ಸಮಸ್ಯೆ ಗಳಿಗೆ ಒಳಗಾಗಿ ಸಂಕಷ್ಟಕ್ಕೆ ಒಳಗಾಗಿರುವ ವ್ಯಕ್ತಿ ಗಳನ್ನು ಪಾರು ಮಾಡುವ ಉದ್ದೇಶ ದಿಂದ ಸ್ನೇಹಾಲಯ ವ್ಯಸನ ಮುಕ್ತಿ ಕೇಂದ್ರ ವನ್ನು ಆರಂಭಿಸಲು ಯೋಚಿಸಲಾಯಿತು. ಈ ಕೇಂದ್ರ \ದ ಮೂಲಕ ಪ್ರತಿ ತಿಂಗಳು ಸುಮಾರು60 ಮಂದಿ ವ್ಯಸನಿಗಳಿಗೆ ಒಂದು ತಿಂಗಳ ಚಿಕಿತ್ಸೆ, ಸಮಾಲೋಚನೆ ಹಾಗೂ ಸಲಹೆ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆ ಹಾಗೂ ಆರೈಕೆ ಅಗತ್ಯ ವಿದ್ದಲ್ಲಿ ಸ್ನೇಹಾಲಯದ ಪುನರ್ವಸತಿ ಕೇಂದ್ರ ದಲ್ಲಿ ಚಿಕಿತ್ಸೆ ಹಾಗೂ ಆರೈಕೆ ಯನ್ನು ಮುಂದುವರಿಸಿ ಅವರು ಮರಳಿ ತಮ್ಮ ಕುಟುಂಬ ವನ್ನು ಸೇರಲು ನೆರವು ನೀಡಲಾಗುವುದು ಎಂದು ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.
ಆಟೋ ಚಾಲಕನಿಂದ ನಿರ್ಮಾಣಗೊಂಡ ಸ್ನೇಹಾಲಯ :-
ಮಂಗಳೂರಿನಲ್ಲಿ ಆಟೋ ಚಾಲಕನಾಗಿದ್ದ ಜೋಸೆಫ್ ಕ್ರಾಸ್ತಾ ಮಂಗಳೂರು ನಗರದ ಮೀನು ಮಾರುಕಟ್ಟೆಯ ಬಳಿ ಹಸಿದ ಹೊಟ್ಟೆಯಲ್ಲಿ ದಯಾನೀಯ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಕಂಡು ತಾನು ಊಟ ಮಾಡದೆ ಅದನ್ನು ಆಕೆಗೆ ನೀಡುತ್ತಾರೆ. ಈ ರೀತಿ ತಾನು ಊಟಕ್ಕಾಗಿ ದಿನ ನಿತ್ಯ ವ್ಯಯಮಾಡುವ 100 ರೂಗಳನ್ನು ಉಳಿಸಿ ಬೀದಿ ಬದಿಯ ಊಟವಿಲ್ಲದೆ ನರಳುವ ಕೆಲವರ ಹಸಿವನ್ನು ತಣಿಸುವ ಕೆಲಸದ ಮೂಲಕ ಆರಂಭಗೊಂಡ ಜೋಸೆಫ್ ಕ್ರಾಸ್ತರ ಸೇವಾ ಚಟುವಟಿಕೆಗಳು ಮಂಜೇಶ್ವರ ದ ಸ್ನೇಹಾಲಯ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ 2009 ರಂದು ಆಗಸ್ಟ್ 26ರ ಮದರ್ ಥೆರೆಸಾ ರ ಜನ್ಮ ದಿನದಂದು ಆರಂಭಗೊಂಡಿದೆ. ಇದರ ಮೂಲಕ ಸುಮಾರು ಒಂದು ಸಾವಿರಕ್ಕೂ ಅಧಿಕ ನಿರಾಶ್ರಿತರಿಗೆ, ಮಾನಸಿಕ ಅಸ್ವಸ್ಥತೆಯಿಂದ ಕೂಡಿದವರಿಗೆ ಚಿಕಿತ್ಸೆ ,ಆರೈಕೆ ಪುನರ್ವಸತಿ ಕಲ್ಪಿಸಲಾಗಿದೆ. ಈ ಪೈಕಿ ಸುಮಾರು 800ಕ್ಕೂ ಅಧಿಕ ಮಂದಿ ಮರಳಿ ತಮ್ಮ ಕುಟುಂಬಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಪ್ರಕಾಶ್ ಪಿಂಟೋ, ಒಲಿವಿಯಾ ಕ್ರಾಸ್ತಾ, ಮಿಥುನ್, ಎಲಿಯಾಸ್ ಫೆರ್ನಾಂಡಿಸ್, ರೇಮಂಡ್ ಡಿ ಕುನ್ಹಾ ಉಪಸ್ಥಿತರಿದ್ದರು.