ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಸೌಹಾರ್ದತೆ
Update: 2022-09-03 17:34 IST
ಉಡುಪಿ, ಸೆ.3: ಉದ್ಯಾವರ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವಿಸರ್ಜನಾ ಮೆರವಣಿಗೆಯೂ ಉದ್ಯಾವರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿಸರ್ಜನಾ ಮೆರವಣಿಗೆ ಗುಡ್ಡೆಅಂಗಡಿ ತಲುಪುತ್ತಿದ್ದಂತೆ ಉದ್ಯಾವರ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವ್ಯಾಪ್ತಿಯ ಕಥೊಲಿಕ್ ಸಭಾ ಹಾಗೂ ಸೌಹಾರ್ದ ಸಮಿತಿ ಉದ್ಯಾವರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಮತ್ತು ಸಾರ್ವಜನಿಕರಿಗೆ ತಂಪು ಪಾನೀಯ ಹಾಗೂ ಸಿಹಿತಿಂಡಿ ವಿತರಿಸಿ ಸೌಹಾರ್ದತೆ ಮೆರೆಯಲಾಯಿತು.
ಈ ಸಂದರ್ಭದಲ್ಲಿ ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಅಂದ್ರಾದೆ, ಸೌಹಾರ್ದ ಸಮಿತಿ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಪ್ರಮುಖರಾದ ಟೆರೆನ್ಸ್ ಪಿರೇರಾ, ಫ್ರ್ಯಾಂಕಿ ಕರ್ಡೊಜ, ಸ್ಟೀವನ್ ಕುಲಾಸೊ, ರೊನಾಲ್ಡ್ ಡಿಸೋಜ, ಸ್ಟೀವನ್ ಲುವಿಸ್, ಅನಿಲ್ ಲೋಬೊ, ರಿಯಾಜ್ ಪಳ್ಳಿ, ಆಬೀದ್ ಅಲಿ, ಜೊಯ್ ಸ್ಟನ್ ಕ್ಯಾಸ್ತಲಿನೋ, ವಿವಿಯನ್ ಪಿರೇರಾ, ರುಡಾಲ್ಫ್ ಮಚಾದೊ ಉಶಾ ಲೊಬೊ, ರೋಲ್ವಿನ್, ಲೆಸ್ಟರ್, ರೊಯಲ್, ಪ್ರೇಮ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.