×
Ad

2022-23ನೇ ಸಾಲಿನ ಶಿಕ್ಷಕರ ದಿನಾಚರಣೆ; ಉಡುಪಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 17 ಮಂದಿ ಆಯ್ಕೆ

Update: 2022-09-03 20:00 IST

ಉಡುಪಿ, ಸೆ.3: 2022-23ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗಗಳ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಶಿಕ್ಷಕರ ದಿನೋತ್ಸವ ಹಾಗೂ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಸೆ.5ರ ಸೋಮವಾರ ಅಪರಾಹ್ನ 2.30ಕ್ಕೆ ಮಣಿಪಾಲದ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿದೆ.

2022-23ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲೆಯ 17 ಮಂದಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವಿವರ:

ಕಿರಿಯ ಪ್ರಾಥಮಿಕ ವಿಭಾಗ: 1.ರಾಮ ಶೆಟ್ಟಿ, ಮುಖ್ಯ ಶಿಕ್ಷಕ, ವಿದ್ಯಾಮಂದಿರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ- ಬ್ರಹ್ಮಾವರ ವಲಯ, 2.ಸುಜಾತ ಕೆ., ಸಹ ಶಿಕ್ಷಕಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆಳಸುಂಕ- ಕುಂದಾಪುರ ವಲಯ, 3.ತನುಜಾಕ್ಷಿ, ಸಹ ಶಿಕ್ಷಕಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಳಕಾಡು- ಉಡುಪಿ, 4.ಹರಿಣಿ ಶೆಟ್ಟಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಂಡಾಡು-ಕಾರ್ಕಳ ವಲಯ, 5. ಮಾಧವ ಬಿಲ್ಲವ, ಸಹ ಶಿಕ್ಷಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಲಂದೂರು-ಬೈಂದೂರು ವಲಯ ಹಾಗೂ ದಿನೇಶ್, ಸಹ ಶಿಕ್ಷಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಜ್ರಿಗದ್ದೆ- ಬೈಂದೂರು ವಲಯ.

ಪ್ರಾಥಮಿಕ ಶಾಲಾ ವಿಭಾಗ: 1.ಬಿ.ಎಸ್.ದೇವಕುಮಾರಿ, ಮುಖ್ಯ ಶಿಕ್ಷಕಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ- ಬ್ರಹ್ಮಾವರ ವಲಯ, 2.ಲಲಿತ ಚಂದ್ರ ಪಟಗಾರ್, ಮುಖ್ಯ ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸೂರು- ಬೈಂದೂರು ವಲಯ, 3.ಸತ್ಯಸಾಯಿ ಪ್ರಸಾದ್, ದೈಹಿಕ ಶಿಕ್ಷಣ ಶಿಕ್ಷಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜೀವನಗರ- ಉಡುಪಿ ವಲಯ, 4.ಆನಂದ ಪೂಜಾರಿ, ದೈಹಿಕ ಶಿಕ್ಷಣ ಶಿಕ್ಷಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ವತ್ತೂರು ಕೊಳಕೆ- ಕಾರ್ಕಳ ವಲಯ, 5. ನವೀನ್‌ ಚಂದ್ರ ಹೆಗ್ಡೆ, ಸಹ ಶಿಕ್ಷಕ, ದುರ್ಗಾಪರಮೇಶ್ವರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ತೊಂಬಟ್ಟು- ಕುಂದಾಪುರ ವಲಯ ಮತ್ತು ಉದಯ ಕುಮಾರ್ ಶೆಟ್ಟಿ, ಸಹ ಶಿಕ್ಷಕ, ಕೆ.ಪಿ.ಎಸ್.ಪ್ರಾಥಮಿಕ ವಿಭಾಗ ಸಿದ್ಧಾಪುರ- ಕುಂದಾಪುರ ವಲಯ.

ಪ್ರೌಢ ಶಾಲಾ ವಿಭಾಗ: 1.ಆಝಾದ್ ಮೊಹಮ್ಮದ್, ದೈಹಿಕ ಶಿಕ್ಷಣ ಶಿಕ್ಷಕ, ಸರಕಾರಿ ಪ್ರೌಢ ಶಾಲೆ ಆವರ್ಸೆ- ಬ್ರಹ್ಮಾವರ ವಲಯ, 2.ಗಣೇಶ ಶೆಟ್ಟಿಗಾರ್, ಸಹ ಶಿಕ್ಷಕ, ಸರಕಾರಿ ಪ್ರೌಢ ಶಾಲೆ ಕಾಳಾವರ- ಕುಂದಾಪುರ ವಲಯ, 3.ರವೀಂದ್ರ ಪಿ., ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು- ಬೈಂದೂರು ವಲಯ, 4.ರೂಪರೇಖಾ ಎಚ್. ಮುಖ್ಯ ಶಿಕ್ಷಕಿ, ಸರಕಾರಿ ಪ್ರೌಢ ಶಾಲೆ ಮಣಿಪುರ- ಉಡುಪಿ ವಲಯ, 5.ದಿನೇಶ್ ನಾಯಕ್, ಸಹ ಶಿಕ್ಷಕ, ಎಂ.ವಿ. ಶಾಸ್ತ್ರಿ ಪ್ರೌಢ ಶಾಲೆ ಇನ್ನಾ- ಕಾರ್ಕಳ ವಲಯ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News