×
Ad

ಸೆ.4ರಂದು ಉಡುಪಿ ಜಿಲ್ಲೆಯ ನಾನಾ ಕಡೆ ಮದ್ಯ ಮಾರಾಟ ನಿಷೇಧ: ಡಿಸಿ ಕೂರ್ಮಾರಾವ್

Update: 2022-09-03 20:28 IST

ಉಡುಪಿ, ಸೆ.3: ಗಣೇಶ ಹಬ್ಬದ ಆಚರಣೆಯ ಗಣೇಶ ಮೂರ್ತಿ ವಿಸರ್ಜನೆಯ ಪ್ರಯುಕ್ತ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ, ಬೈಲೂರು, ಕೌಡೂರು ಹಾಗೂ ನೀರೆಗ್ರಾಮ, ಕಾಪು ತಾಲೂಕಿನ ಪುರಸಭಾ ವ್ಯಾಪ್ತಿ, ಕಾಪು ಪಡು, ಮಲ್ಲಾರು, ಮೂಳೂರು, ಉಳಿಯಾರಗೋಳಿ ಹಾಗೂ ಮಜೂರು ಗ್ರಾಮ. ಕುಂದಾಪುರ ತಾಲೂಕು ನಗರ ಠಾಣಾ ವ್ಯಾಪ್ತಿಯ ಕಸಬಾ, ವಡೇರಹೋಬಳಿ ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮಗಳ ವ್ಯಾಪ್ತಿಯಲ್ಲಿ ಬಾರ್ ಮತ್ತು ವೈನ್‌ಶಾಪ್‌ಗಳು ತೆರೆದಿದ್ದಲ್ಲಿ ಮದ್ಯಪಾನಾಸಕ್ತರು ಮದ್ಯಪಾನ ಮಾಡಿ ಗಲಭೆ ಸೃಷ್ಟಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಬಕಾರಿ ಕಾಯ್ದೆಯನ್ವಯ ಈ ಮೇಲಿನ ಎಲ್ಲಾ ಗ್ರಾಮಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್, ರೆಸ್ಟೋರೆಂಟ್ ಮತ್ತು ವೈನ್ ಶಾಪ್‌ಗಳಲ್ಲಿ ಸೆಪ್ಟಂಬರ್ 4ರ ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿ, ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶ ಹೊರಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News