×
Ad

ರಾಜಕೀಯ ಕೈದಿಗಳ ಬಿಡುಗಡೆಗೆ ಆಗ್ರಹಿಸಿ ರಾಷ್ಟ್ರಪತಿಗೆ ಮನವಿ

Update: 2022-09-03 21:29 IST

ಉಡುಪಿ, ಸೆ.3: ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇದರ ವತಿಯಿಂದ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲೆಯಾದ್ಯಂತ  ಸಾವಿರಾರು ಸಹಿ ಸಂಗ್ರಹ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕುರಿತ ಸಹಿ ಸಂಗ್ರಹ ಮನವಿಯನ್ನು ಇಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಮೂಲಕ ರಾಷ್ಟಪತಿಗೆ ಸಲ್ಲಿಸಲಾಯಿತು.

ದೇಶದಲ್ಲಿ 4,88,511 ರಾಜಕೀಯ ಕೈದಿಗಳಿದ್ದು, ಅದರಲ್ಲೂ ಶೇ.80 ಅಂದರೆ 3,71,848 ವಿಚಾರಣಾಧೀನ ಕೈದಿಗಳಿದ್ದಾರೆಂದು ರಾಷ್ಟ್ರೀಯ ಅಪರಾಧ ವರದಿ ಹೇಳುತ್ತಿದೆ. ಇವರು ಯಾವುದೇ ಸ್ವಾರ್ಧವಿಲ್ಲದೆ ದೇಶದ, ನಾಗರಿಕರ ಪರ ಮತ್ತು ಸಂವಿಧಾನಕ್ಕೆ ವಿರುದ್ದವಾದ ಪ್ರಭುತ್ವದ ನೀತಿಗಳ ವಿರುಧ್ದ ತನ್ನ ಅಭಿಪ್ರಾಯವನ್ನು ಮಂಡಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮರ್ಧಿತರ, ಆದಿವಾಸಿಗಳ ದ್ವನಿಯಾಗಿ ಮತ್ತು ದೇಶದ ನೈಸರ್ಗಿಕ ಸಂಪತ್ತಿನ ರಕ್ಷಣೆಗಾಗಿ ಹೋರಾಡಿದವರಾಗಿದ್ದಾರೆ. ಇವರ ಬಿಡುಗಡೆಗಾಗಿ ರಾಷ್ಟಪತಿಗಳು ಕೂಡಲೇ ಮಧ್ಯೆ ಪ್ರವೇಶಿಸಿಸಬೇಕೆಂದು ಎಂದು ಪಾರ್ಟಿ ಒತ್ತಾಯಿಸಿದೆ.  ನಿಯೋಗದಲ್ಲಿ ವೆಲ್ಫೇರ್ ಪಾರ್ಟಿಯ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ, ಉಪಾಧ್ಯಕ್ಷ ಶಹಜಹಾನ್ ತೋನ್ಸೆ, ಮುಖಂಡರಾದ ರಿಯಾಝ್ ಅಹಮದ್, ಅಬ್ದುಲ್ ರಝಾಕ್, ಅಬ್ದುಲ್ ಖಾದರ್ ಉಪಸ್ದಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News